HomeLatest NewsBREAKING NEWS: ಏಷ್ಯನ್ ಗೇಮ್ಸ್ ಭಾರತಕ್ಕೆ ಮತ್ತೊಂದು ಪದಕ ಖಚಿತ: ಸೆಮಿಫೈನಲ್ ಗೆ ರೋಶಿಬಿನಾ ದೇವಿ

BREAKING NEWS: ಏಷ್ಯನ್ ಗೇಮ್ಸ್ ಭಾರತಕ್ಕೆ ಮತ್ತೊಂದು ಪದಕ ಖಚಿತ: ಸೆಮಿಫೈನಲ್ ಗೆ ರೋಶಿಬಿನಾ ದೇವಿ

ಹಾಂಗ್ ಝೌ: ಏಷ್ಯನ್ ಗೇಮ್ಸ್‌ನಲ್ಲಿ ಸ್ಯಾಂಡೋದಲ್ಲಿ ನಡೆದ ಮಹಿಳೆಯರ 60 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಅನುಭವಿ ವುಶು ತಾರೆ ರೋಶಿಬಿನಾ ದೇವಿ ನೌರೆಮ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ರೋಶಿಬಿನಾ ತಮ್ಮ ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಕಜಕಿಸ್ತಾನ್‌ನ ಐಮನ್ ಕಾರ್ಶಿಗಾ ವಿರುದ್ಧ ಗ್ಯಾಪ್ ಪಾಯಿಂಟ್‌ನಿಂದ ಗೆದ್ದರು. ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ವುಶುನಲ್ಲಿ ಪದಕ ಖಚಿತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2018 ರಲ್ಲಿ ಜಕಾರ್ತದಲ್ಲಿ ಕಂಚಿನ ಪದಕ ಗೆದ್ದಿದ್ದ ರೋಶಿಬಿನಾ ದೇವಿ ನೌರೆಮ್ ಅವರಿಗೆ ಏಷ್ಯಾಡ್ ಮಟ್ಟದಲ್ಲಿ ಇದು ಎರಡನೇ ಪದಕವಾಗಿದೆ. ಇದು ಏಷ್ಯನ್ ಗೇಮ್ಸ್ 2023 ರಲ್ಲಿ ವುಶುನಲ್ಲಿ ಭಾರತಕ್ಕೆ ಮೊದಲ ಪದಕವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular