ನವದೆಹಲಿ: ಏಷ್ಯನ್ ಗೇಮ್ಸ್ ನ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಗೆದ್ದಿದ್ದಾರೆ. ಹಾಗೂ ಪ್ರೀತಿ ಲಂಬಾ ಕಂಚಿನ ಪದಕ ಗೆದ್ದಿದ್ದಾರೆ.
ಏಷ್ಯನ್ ಗೇಮ್ಸ್ ನಲ್ಲಿ ಸೋಮವಾರ ಪುರುಷರ ಮತ್ತು ಮಹಿಳೆಯರ 3000 ಮೀಟರ್ ಟೀಮ್ ರಿಲೇ ಸ್ಪರ್ಧೆಗಳಲ್ಲಿ ಭಾರತದ ರೋಲರ್ ಸ್ಕೇಟರ್ ಗಳು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್’ನಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಪದಕ ಗೆದ್ದರೆ, ಪ್ರೀತಿ ಲಂಬಾ ಕಂಚಿನ ಪದಕಕ್ಕೆ ಮುತ್ತಿಟ್ಟರು.
https://twitter.com/PTI_News/status/1708806866736751044?ref_src=twsrc%5Etfw%7Ctwcamp%5Etweetembed%7Ctwterm%5E1708806866736751044%7Ctwgr%5Eb489f293a9d68d7774c83beaa8cb64683168b413%7Ctwcon%5Es1_&ref_url=https%3A%2F%2Fkannadanewsnow.com%2Fkannada%2Fbreaking-parul-chaudhary-wins-silver-preeti-lamba-wins-bronze-in-steeplechase-asian-games-2023%2F
ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನೊಳಗೊಂಡ ಮಹಿಳಾ ತಂಡ ಭಾರತದ ಖಾತೆ ತೆರೆದರೆ, ಆರ್ಯನ್ಪಾಲ್ ಸಿಂಗ್ ಘುಮನ್, ಆನಂದಕುಮಾರ್ ವೆಲ್ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಳೆ ಎರಡನೇ ಕಂಚಿನ ಪದಕ ಗೆದ್ದರು. ಮತ್ತೊಂದೆಡೆ, ಕೊರಿಯಾ ವಿರುದ್ಧದ ಮಹಿಳಾ ಡಬಲ್ಸ್ ಸೆಮಿಫೈನಲ್ನಲ್ಲಿ ಸೋಲನುಭವಿಸಿದ ನಂತರ ಸುತೀರ್ಥ ಮುಖರ್ಜಿ ಮತ್ತು ಆಹಿಕಾ ಮುಖರ್ಜಿ ಅವರ ಓಟವು ಕಂಚಿನ ಪದಕದೊಂದಿಗೆ ಕೊನೆಗೊಂಡಿತು.