HomeKarnatakaಆಶಾ ಕಾರ್ಯಕರ್ತೆಯರ ಆಶಾ ಭಾವನೆಯನ್ನೇ ಕಿತ್ತುಕೊಂಡ ಕಾಂಗ್ರೆಸ್: 15,000 ರೂ. ಗೌರವ ಧನ ಎಂದು ಬುರುಡೆ...

ಆಶಾ ಕಾರ್ಯಕರ್ತೆಯರ ಆಶಾ ಭಾವನೆಯನ್ನೇ ಕಿತ್ತುಕೊಂಡ ಕಾಂಗ್ರೆಸ್: 15,000 ರೂ. ಗೌರವ ಧನ ಎಂದು ಬುರುಡೆ ಬಿಟ್ಟ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ

ಬೆಂಗಳೂರು: ಚುನಾವಣೆಗೂ ಮುನ್ನ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಕಿವಿ ಮೇಲೆ ಇಟ್ಟಿದ್ದ ಹೂವನ್ನು ಕಾಂಗ್ರೆಸ್ ಇನ್ನೂ ಮುಂದುವರಿಸಿದೆ ಎಂದು ರಾಜ್ಯ ಬಿಜೆಪಿ ಘಟಕ ವಾಗ್ದಾಳಿ ನಡೆಸಿದೆ.

ಹಗಲಿರುಳು ಬೆವರು ಸುರಿಸಿ ದುಡಿಯುವ ಕಾರ್ಯಕರ್ತೆಯರಿಗೆ 15,000 ರೂ. ಗೌರವ ಧನ ನೀಡುವುದಾಗಿ ಬುರುಡೆ ಬಿಟ್ಟ ಸಿದ್ದರಾಮಯ್ಯ ಅವರು ವಚನ ಭ್ರಷ್ಟರಾಗಿದ್ದಾರೆ.

ಮಂದ ಬುದ್ದಿಯ ಬಾಲಕ ರಾಹುಲ್‌ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರೇ ಚುನಾವಣೆ ಸಮಯದಲ್ಲಿ ಘೋಷಣೆ ಮಾಡಿದ್ದನ್ನು ಕಾಂಗ್ರೆಸ್‌ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಸಾಮಜೈಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಬಿಜೆಪಿ ಕಿಡಿಕಾರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular