ಈ ಗ್ರಹಗಳ ದೋಷದಿಂದ ಹಾಳಾಗಬಹುದು ಪ್ರೇಮ ಸಂಬಂಧ

ಸಂಬಂಧದಲ್ಲಿ ಏರಿಳಿತಗಳಾಗುವುದು ಸಹಜ. ಅದರಲ್ಲೂ ಪ್ರೇಮ ಸಂಬಂಧದಲ್ಲಿ ಹೆಚ್ಚು ಸಮಸ್ಯೆಗಳು ಬಂದು ಕಾಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದಕ್ಕೆ ಗ್ರಹಗಳ ದೋಷಗಳು ಕಾರಣವಂತೆ. ಹಾಗಾಗಿ 9 ಗ್ರಹಗಳಲ್ಲಿ ಕೆಲವು ಗ್ರಹಗಳ ದೋಷದಿಂದ ಪ್ರೇಮ ಸಂಬಂಧ ಹಾಳಾಗುತ್ತದೆಯಂತೆ.

ಶುಕ್ರ : ಪ್ರೇಮ ಸಂಬಂಧದಲ್ಲಿ ಶುಕ್ರ ಪ್ರಮುಖ ಪಾತ್ರವಹಿಸುತ್ತಾನೆ. ಯಾರ ಜಾತಕದಲ್ಲಿ ಶುಕ್ರ ದುರ್ಬಲನಾಗಿರುತ್ತಾನೋ ಅವರಿಗೆ ಸಂಗಾತಿಯ ಜೊತೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಜಾತಕದಲ್ಲಿ ಶುಕ್ರಗ್ರಹವನ್ನು ಬಲಪಡಿಸಲು ಪ್ರಯತ್ನಿಸಿ.

ಬುಧ : ಹಲವರ ಪ್ರೇಮ ಸಂಬಂಧ ಹಾಳಾಗಲು ಬುಧ ಗ್ರಹವು ಕಾರಣವಾಗಿದೆ. ಜಾತಕದಲ್ಲಿ ಬುಧನು ದುರ್ಬಲನಾಗಿದ್ದರೆ ನಿಮ್ಮ ಸಂಗಾತಿಯೊಂದಿಗೆ ನಿಮಗೆ ಸಂತೋಷದಿಂದ ಇರಲು ಸಾಧ್ಯವಾಗುವುದಿಲ್ಲವಂತೆ. ಹಾಗಾಗಿ ಬುಧನ ಅನುಗ್ರಹ ಪಡೆಯಲು ಪರಿಹಾರಗಳನ್ನು ಮಾಡಿ.

ಗುರು : ಗುರು ಮದುವೆ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಗ್ರಹವಾಗಿದೆ. ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಅಂತಹ ಜನರ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆ ಎದುರಾದಾಗ ಗುರು ದೋಷವನ್ನು ಸರಿಪಡಿಸಿಕೊಳ್ಳಲು ಮುಂದಾಗಿ.

ಒಟ್ಟಾರೆ ನಿಮ್ಮ ಪ್ರೇಮ ಸಂಬಂಧಕ್ಕೆ ಎಲ್ಲರ ಒಪ್ಪಿಗೆ ಸಿಕ್ಕಿ ಅದು ಮದುವೆ ಎಂಬ ಬಂಧನದಲ್ಲಿ ಸಿಲುಕಬೇಕೆಂದರೆ ಈ ಗ್ರಹಗಳು ಅನುಕೂಲಕರವಾಗಿರುವಂತೆ ನೋಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read