HomeLatest Newsಆಗಸ್ಟ್ 3 ಕ್ಕೆ ಬರಲಿದೆ 'ಸ್ಪಾರ್ಕ್' ಚಿತ್ರದ ಮೊದಲ ಗೀತೆ: ನಿರಂಜನ್ ಸುಧೀಂದ್ರ ಸಿನಿಮಾದಿಂದ ಹೊಸ...

ಆಗಸ್ಟ್ 3 ಕ್ಕೆ ಬರಲಿದೆ ‘ಸ್ಪಾರ್ಕ್’ ಚಿತ್ರದ ಮೊದಲ ಗೀತೆ: ನಿರಂಜನ್ ಸುಧೀಂದ್ರ ಸಿನಿಮಾದಿಂದ ಹೊಸ ಅಪ್‌ಡೇಟ್

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ಸ್ಪಾರ್ಕ್’ ಸಿನಿಮಾದಿಂದ ಹೊಸ ಅಪ್‌ಡೇಟ್ ಬಂದಿದೆ. ಈ ಚಿತ್ರದ ಮೊದಲ ಹಾಡು ಆಗಸ್ಟ್ ೩ ರಂದು ಸಂಜೆ ೬ ಗಂಟೆಗೆ ಯೂಟ್ಯೂಬ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಈ ಸಿನಿಮಾದಲ್ಲಿ ಯುವ ನಟ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಹಿರಿಯ ನಟ ನೆನಪಿರಲಿ ಪ್ರೇಮ್, ಸಧು ಕೋಕಿಲ, ಧರ್ಮಣ್ಣ ಕಡೂರ್, ರಮೇಶ್ ಇಂದಿರಾ, ಬಾಲರಾಜವಾಡಿ, ನರೇಂದ್ರ ಬಾಬು ಹಾಗೂ ಗಣೇಶ್ ರಾವ್ ಸೇರಿದಂತೆ ಪ್ರಮುಖ ತಾರಾಗಣ ಈ ಚಿತ್ರದಲ್ಲಿದೆ.

ಗರಿಮಾ ಅವಿನಾಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಗರಿಮಾ ಅವಿನಾಶ್ ವಸಿಷ್ಠ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡಿ ಮಹಾಂತೇಶ ಹಂದ್ರಾಲ್ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶುಭಂ ಸಿಂಗ್ ಕಾರ್ಯಾಂಗ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಈ ಚಿತ್ರಕ್ಕೆ ಶ್ರಾವ್ಯ ಸಂಯೋಜನೆ ಮಾಡಿದ್ದು, ಸ್ವಾಮಿ ಜೆ ಗೌಡ ಅವರ ಛಾಯಾಗ್ರಹಣವಿದೆ. ಮಧು ತುಂಬಕೆರೆ ಸಂಕಲನ, ರಘು ನಿಡುವಳ್ಳಿ ಹಾಗೂ ನಾಗಭೂಷಣ್ ಎಸ್ ಆರ್ ಸಂಭಾಷಣೆ ಬರೆದಿದ್ದಾರೆ. ವಿನೋದ್ ಮತ್ತು ನರಸಿಂಹ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರೆ, ಬಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ.

https://www.instagram.com/p/DbascTVgSWw

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular