HomeLatest Newsಬೆಳ್ಳಿತೆರೆಯಲ್ಲಿ ಇಂದಿಗೂ ಮಸುಕಾಗದ ಸೌಂದರ್ಯ: ನಟಿ ಸುಮನ್ ರಂಗನಾಥ್ ಜನ್ಮದಿನದ ಸಂಭ್ರಮ!

ಬೆಳ್ಳಿತೆರೆಯಲ್ಲಿ ಇಂದಿಗೂ ಮಸುಕಾಗದ ಸೌಂದರ್ಯ: ನಟಿ ಸುಮನ್ ರಂಗನಾಥ್ ಜನ್ಮದಿನದ ಸಂಭ್ರಮ!

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಸುಮನ್ ರಂಗನಾಥ್ ಇಂದು ತಮ್ಮ 52ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಜುಲೈ 26, 1974 ರಂದು ಜನಿಸಿದ ಇವರು, ತಮ್ಮ ನಟನಾ ಕೌಶಲ ಮತ್ತು ಸೌಂದರ್ಯದಿಂದ ದಶಕಗಳಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಚಿತ್ರರಂಗಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಸುಮನ್ ರಂಗನಾಥ್ ಅವರ ಅಭಿನಯದ ಪಯಣ ಆರಂಭವಾಗಿದ್ದು 1989ರಲ್ಲಿ ತೆರೆಕಂಡ ಶಂಕರ್ ನಾಗ್ ಅವರ ‘ಸಿಬಿಐ ಶಂಕರ್’ ಚಿತ್ರದ ಮೂಲಕ. ಮೊದಲ ಸಿನಿಮಾದಲ್ಲೇ ಭಾರಿ ಯಶಸ್ಸು ಕಂಡ ಇವರು, ನಂತರ ಬಾಲ ಹೊಂಬಾಳೆ, ಡಾಕ್ಟರ್ ಕೃಷ್ಣ, ಸಂತ ಶಿಶುನಾಳ ಶರೀಫ ಹಾಗೂ ನಮ್ಮೂರ ಹಮ್ಮೀರ ಮುಂತಾದ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು.

ಕನ್ನಡದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಂತೆಯೇ ಇವರಿಗೆ ತಮಿಳು ಹಾಗೂ ಬಾಲಿವುಡ್‌ನಿಂದಲೂ ಅವಕಾಶಗಳು ಹುಡುಕಿಕೊಂಡು ಬಂದವು. 1990ರಲ್ಲಿ ‘ಪುದು ಪಾಟ್ಟು’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು, ಮಹಾನಗರ ಕಾವಲ್, ಪೆರುಮ್ ಪುಳ್ಳಿ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದರು. 1996ರಲ್ಲಿ ತೆರೆಕಂಡ ‘ಫರೇಬ್’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಸುಮನ್, ನಂತರ ಆ ಅಬ್ ಲೌಟ್ ಚಲೇ ಮತ್ತು ಅಮಿತಾಬ್ ಬಚ್ಚನ್ ಅಭಿನಯದ ‘ಬಾಗ್‌ಬಾನ್’ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಇವರು, 2013ರಲ್ಲಿ ಅಜಿತ್ ಕುಮಾರ್ ಅಭಿನಯದ ‘ಆರಂಭಂ’ ತಮಿಳು ಚಿತ್ರದ ಮೂಲಕ ಕಂಬ್ಯಾಕ್ ಮಾಡಿದರು. ಅದಾದ ಬಳಿಕ ಕನ್ನಡದಲ್ಲಿ ‘ನೀರ್ ದೋಸೆ’ ಹಾಗೂ ‘ಕವಲುದಾರಿ’ಯಂತಹ ಪ್ರಸಿದ್ದ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮತ್ತೆ ಮಂತ್ರಮುಗ್ಧರನ್ನಾಗಿಸಿದರು. ಇತ್ತೀಚಿನ ವರ್ಷಗಳಲ್ಲಿ ಹೋಮ್ ಮಿನಿಸ್ಟರ್, ಪೆಟ್ರೋಮ್ಯಾಕ್ಸ್, ತೋತಾಪುರಿ ಭಾಗ 1 ಮತ್ತು 2 ಹಾಗೂ ಸಿಡ್ಲಿಂಗು 2 ಮುಂತಾದ ಸಿನಿಮಾಗಳ ಮೂಲಕ ಸಕ್ರಿಯರಾಗಿದ್ದಾರೆ.

ಕಿರುತೆರೆಯಲ್ಲೂ ಸಕ್ರಿಯರಾಗಿರುವ ಇವರು ಮಿಷ್ಟರ್ ಇಂಡಿಯಾ ವರ್ಲ್ಡ್ 2007ರಲ್ಲಿ ತೀರ್ಪುಗಾರರಾಗಿದ್ದರು. ಅಲ್ಲದೆ ‘ತಕಧಿಮಿತ’ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, 2019ರಲ್ಲಿ ಕೊಡಗಿನ ಉದ್ಯಮಿ ಸಾಜನ್ ಚಿನ್ನಪ್ಪ ಅವರೊಂದಿಗೆ ವಿವಾಹಬಂಧನಕ್ಕೆ ಒಳಗಾಗಿದ್ದಾರೆ. ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಟಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular