HomeLatest Newsಕನಸು ಮತ್ತು ತ್ಯಾಗದ ಎಮೋಷನಲ್ ಸ್ಟೋರಿ ‘ಹಳ್ಳಿಕಾರ್’ ರಿಲೀಸ್: ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಶಾರ್ಟ್...

ಕನಸು ಮತ್ತು ತ್ಯಾಗದ ಎಮೋಷನಲ್ ಸ್ಟೋರಿ ‘ಹಳ್ಳಿಕಾರ್’ ರಿಲೀಸ್: ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಶಾರ್ಟ್ ಮೂವಿ

ಕನ್ನಡ ಚಿತ್ರರಂಗದಲ್ಲಿ ಸದಾ ಹೊಸತನದ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸದ್ಯ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಹಳ್ಳಿಕಾರ್ ಕಿರುಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಳ್ಳಿಯ ಸೊಗಡು, ಮುಗ್ಧ ಪ್ರೀತಿ, ಕನಸುಗಳು, ಅದಕ್ಕಾಗಿ ಮಾಡುವ ತ್ಯಾಗ ಮತ್ತು ಕೊನೆಯಲ್ಲಿ ಕೈತಪ್ಪಿ ಹೋಗುವ ಪ್ರೇಮದ ನೋವನ್ನು ಈ ಕಿರುಚಿತ್ರದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಡಲಾಗಿದೆ.

ಈ ವಿಶಿಷ್ಟ ಪ್ರೇಮಕಥೆಯನ್ನು ಮಹದೇವ್ ಶಂಕರ್ ಅವರು ನಿರ್ದೇಶನ ಮಾಡಿದ್ದು, ಚಂದನ್ ಮಂಜುನಾಥ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಮನು, ಅನುಷಾ ರಾಜ್, ಶಿಶಿರ ಎಸ್. ಶೆಟ್ಟಿ, ಸಂಗೀತ, ಅರವಿಂದ್, ಯೋಗ ರಾಮ್, ಹರೀಶ್, ವಿಷ್ಣು, ಶಶಾಂಕ್ ಮತ್ತು ಕವನ್ ಸೇರಿದಂತೆ ಹಿರಿಯ ಹಾಗೂ ಕಿರಿಯ ಕಲಾವಿದರ ತಾರಾಗಣವಿದೆ. ಪ್ರತಿಯೊಬ್ಬ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ತಾಂತ್ರಿಕವಾಗಿಯೂ ಈ ಕಿರುಚಿತ್ರ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ಸೂರಜ್ ಅವರ ಸಂಗೀತ ಕಥೆಯ ಭಾವನೆಗಳಿಗೆ ಮತ್ತಷ್ಟು ಬಲ ನೀಡಿದ್ದರೆ, ವಿನೋದ್ ಅವರ ಕ್ಯಾಮೆರಾ ಕೈಚಳಕ ಹಳ್ಳಿಯ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದೆ. ಮೋಹನ್ ಯುವ ಅವರ ಸಂಕಲನ ಮತ್ತು ಕಿಶೋರ್ ಕುಮಾರ್ ಅವರ ಡಿಐ ಕಾರ್ಯ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ, ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಕಿರುಚಿತ್ರವನ್ನು A2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular