ದೇವರು ಬಂದಂತೆ ನಟಿಸಿ ನಿಧಿ ಆಸೆ ತೋರಿಸಿ ವಂಚಿಸುತ್ತಿದ್ದ ದಂಪತಿ ಅರೆಸ್ಟ್

ಚಿತ್ರದುರ್ಗ: ದೇವರು ಬಂದಂತೆ ನಟಿಸಿ ನಿಧಿ ಆಸೆ ತೋರಿಸಿ ಚಿನ್ನಾಭರಣ, ನಗದು ದೋಚುತಿದ್ದ ದಂಪತಿಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸುರಪುರದ ಮುದ್ದುರಂಗಪ್ಪ(58), ಆತನ ಪತ್ನಿ ಮಧುಮತಿ(38) ಬಂಧಿತ ಆರೋಪಿಗಳು. ಚಿತ್ರದುರ್ಗ ತಾಲೂಕಿನ ಮದಕರಿಪುರದಲ್ಲಿ ವಾಸವಾಗಿದ್ದ ಆರೋಪಿಗಳಿಂದ ಒಂದು ಲಕ್ಷ ರೂ. ನಗದು, 85,000 ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಾರ್ ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್ 23ರಂದು ಚಳ್ಳಕೆರೆಯ ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ್ದ ವೇಳೆ ಮೈಮೇಲೆ ದೇವರು ಬಂದಂತೆ ನಟಿಸಿದ ಮಧುಮತಿ, ನಿಮಗೆ ನಿಧಿ ಸಿಗುತ್ತದೆ. ಪೂಜೆ ಮಾಡಿಸಿ, ಇಲ್ಲವಾದರೆ ಕುಟುಂಬದಲ್ಲಿ ಸಾವು ಸಂಭವಿಸುತ್ತದೆ ಎಂದು ಹೆದರಿಸಿದ್ದಾಳೆ.

ಹೋಟೆಲ್ ಮಾಲೀಕ ಶಂಕರಪ್ಪ ಪೂಜೆ ಮಾಡಿಸಿದ್ದಾರೆ. 21 ದಿನ ನಿರಂತರವಾಗಿ ಪೂಜೆ ಮಾಡುವುದಾಗಿ ವಂಚಕರು ನಂಬಿಸಿ 10 ಸಾವಿರ ರೂಪಾಯಿ ಪೂಜೆಗೆ ಬೇಕೆಂದು 1.80 ಲಕ್ಷ ರೂ. ಪಡೆದುಕೊಂಡಿದ್ದಾರೆ. ಪೂಜೆಯ ವೇಳೆ ವಜ್ರದ ಹರಳು ಪತ್ತೆಯಾಗಿದ್ದು, ಅವುಗಳನ್ನು ಇಡಲು ಚಿನ್ನಾಭರಣ ಬೇಕಿದೆ ಎಂದು 15 ಗ್ರಾಂ ಚಿನ್ನಾಭರಣ, ಬೆಳ್ಳಿಯ ಆಭರಣ, ಮೊಬೈಲ್ ಫೋನ್ ಪಡೆದುಕೊಂಡಿದ್ದಾರೆ. ನಿಧಿ ಸಿಗಲಿದೆ ಎಂದು ನಂಬಿಸಿದ ದಂಪತಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ವಂಚನೆಗೊಳಗಾದ ಶಂಕರಪ್ಪ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ನಗದು ಜಪ್ತಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read