HomeBusinessರೈತರಿಗೆ ಗುಡ್ ನ್ಯೂಸ್: ಕ್ವಿಂಟಾಲ್ ಗೆ 7 ಸಾವಿರ ರೂ.ವರೆಗೆ ಹೆಚ್ಚಳವಾಗಿ 50 ಸಾವಿರ ಗಡಿ...

ರೈತರಿಗೆ ಗುಡ್ ನ್ಯೂಸ್: ಕ್ವಿಂಟಾಲ್ ಗೆ 7 ಸಾವಿರ ರೂ.ವರೆಗೆ ಹೆಚ್ಚಳವಾಗಿ 50 ಸಾವಿರ ಗಡಿ ದಾಟಿದ ಅಡಿಕೆ ದರ

ದಾವಣಗೆರೆ: ಕಳೆದ ಎರಡು ತಿಂಗಳಿನಿಂದ ಕುಸಿತವಾಗಿದ್ದ ಅಡಿಕೆ ದರ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದೆ.

ಸೋಮವಾರ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ದರ ಕ್ವಿಂಟಲ್ ಗೆ 50,000 ರೂ. ಗಡಿ ದಾಟಿದ್ದು, ಕ್ವಿಂಟಾಲ್ ಗೆ 6-7 ಸಾವಿರ ರೂ.ವರೆಗೆ ಹೆಚ್ಚಳವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹತ್ತು ವರ್ಷಗಳ ಹಿಂದೆ ಒಂದು ಕ್ವಿಂಟಾಲ್ ಅಡಿಕೆ ದರ 80,000 ರೂ.ವರೆಗೆ ಏರಿಕೆ ಕಂಡಿತ್ತು. ಚನ್ನಗಿರಿ ತುಮ್ಕೋಸ್ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಕ್ವಿಂಟಾಲ್ ಅಡಿಕೆ ದರ ಗರಿಷ್ಠ 50,539 ರೂ.ಗೆ ಮಾರಾಟವಾಗಿದೆ. ಸುಗ್ಗಿ ಶುರುವಾದ ನಂತರ 43 -44 ಸಾವಿರ ರೂ. ಗೆ ಇಳಿದಿದ್ದ ದರ ಈಗ ಮತ್ತೆ ಏರುಗತಿಯಲ್ಲಿ ಸಾಗಿದೆ. ಈ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಡಿಕೆ ಬೆಲೆ ಏರುಗತಿಯಲ್ಲಿ ಸಾಗುತ್ತಿರುವುದು ಬೆಳೆಗಾರರಲ್ಲಿ ಸಂತಸ ತಂದಿದೆ. ಈಗ ಹೆಚ್ಚಳವಾಗುತ್ತಿರುವ ದರ ಹೊಸ ಅಡಿಕೆ ಬರುವವರೆಗೂ ಮುಂದುವರೆಯಲಿದೆ. ಮೂರ್ನಾಲ್ಕು ವರ್ಷಗಳಿಂದ ಅಡಿಕೆ ದರದಲ್ಲಿ ಸ್ಥಿರತೆ ಇದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular