HomeHealthನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆಯಾ......?

ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಇದೆಯಾ……?

ನೀವು ಸ್ವಲ್ಪ ಎಚ್ಚರವಾಗಿದ್ದರೆ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆಯನ್ನು ಮೊದಲೇ ಊಹಿಸಬಹುದು.

ನಿಮಗೆ ಪದೇ ಪದೇ ಮೂತ್ರ ಬಂದ ಅನುಭವವಾಗಬಹುದು. ಆದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯದೆಯೂ ಸ್ವಲ್ಪ ಮಾತ್ರ ಮೂತ್ರ ವಿಸರ್ಜನೆಯಾಗಬಹುದು. ರಾತ್ರಿಯೂ ಹಲವು ಬಾರಿ ಮೂತ್ರ ವಿಸರ್ಜನೆಗೆ ಏಳಬೇಕಾಗುವುದು ಮಧುಮೇಹದ ಲಕ್ಷಣವಿರಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಪರೀತ ಬಾಯಾರಿಕೆಯೂ ಇದರ ಲಕ್ಷಣ. ಹೆಚ್ಚಿನ ಅಂಶದ ನೀರು ದೇಹದಿಂದ ಹೊರಹೋಗುವುದರಿಂದ ದೇಹಕ್ಕೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತದೆ. ಅನಿರೀಕ್ಷಿತವಾಗಿ ತೂಕ ಇಳಿಯುವುದೂ ಮಧುಮೇಹದ ಲಕ್ಷಣವಾಗಿರಬಹುದು. ಎರಡು ಮೂರು ತಿಂಗಳಲ್ಲಿ ಹತ್ತು ಕೆಜಿ ವರೆಗೆ ತೂಕ ಕಳೆದುಕೊಳ್ಳುವುದು ಆರೋಗ್ಯಕರ ಲಕ್ಷಣವಲ್ಲ.

ದಿನವಿಡೀ ಹಸಿವಾಗುತ್ತಿರುವುದು, ತ್ವಚೆಯಲ್ಲಿ ಅಲ್ಲಲ್ಲಿ ತುರಿಕೆ ಕಾಣಿಸಿಕೊಳ್ಳುವುದು, ಸಣ್ಣ ಗಾಯವೂ ವಾಸಿಯಾಗದೆ ಬಹುಕಾಲ ಕಾಡುವುದು ಸಕ್ಕರೆ ಕಾಯಿಲೆಯ ಆರಂಭದ ಲಕ್ಷಣಗಳಾಗಿರಬಹುದು. ಕೈಕಾಲು ಮರಗಟ್ಟುವುದು, ದೃಷ್ಟಿ ಸಮಸ್ಯೆ, ಫಂಗಲ್ ಇನ್ ಫೆಕ್ಷನ್ ಕೂಡಾ ಇದರ ಲಕ್ಷಣವಾಗಿರಬಹುದು. ಹಾಗಾಗಿ ಈ ಸಂದರ್ಭದಲ್ಲಿ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

For Latest News Updates, Join Our Whatsapp Community🚩
RELATED ARTICLES

Most Popular