HomeKarnatakaಅರಬ್ಬಿ ಸಮುದ್ರ ತೀರದಲ್ಲಿ ಬಿರುಗಾಳಿ ಅಬ್ಬರ: ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಅರಬ್ಬಿ ಸಮುದ್ರ ತೀರದಲ್ಲಿ ಬಿರುಗಾಳಿ ಅಬ್ಬರ: ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಕಾರವಾರ: ಅರಬ್ಬಿ ಸಮುದ್ರದಲ್ಲಿ ಗಾಳಿಯ ಅಬ್ಬರ ಜೋರಾಗಿದ್ದು, ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರ ಪ್ರಕ್ಷುಬ್ಧಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಅರವಾರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಹಾಗೂ ಬಿರುಗಾಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಕಡಲ ತಿರದಲ್ಲಿ ಕೆಂಪು ಬಾವುಟ ನೆಟ್ಟು ರೆಡ್ ಜೋನ್ ಗುರುತಿಸಲಾಗಿದೆ. ಪ್ರವಾಸಿಗರ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿರ್ಬಂಧವಿದ್ದರೂ ಕಾರವಾರ ಕಡಲ ತೀರಕ್ಕೆ ಪ್ರವಾಸಿಗರು ದಂಡೇ ಹರಿದು ಬರುತ್ತಿದೆ. ವೀಕೆಂಡ್ ಹಿನ್ನಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚುತ್ತಿದೆ. ಜಿಲ್ಲಾಡಳಿತದ ಎಚ್ಚರಿಕೆಗೂ ಡೋಂಟ್ ಕೇರ್ ಎಂದಿರುವ ಪ್ರವಾಸಿಗರು ಸಮುದ್ರದಲ್ಲಿ ಅಲೆಗಳ ಅಬರ ಜೋರಾಅಗಿದ್ದರೂ ತಲೆಕೆಡಿಸಿಕೊಳ್ಳದೇ ಕಡಲಿಗಿಳಿದು ಹುಚ್ಚಾಟ ಮೆರೆದಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಲೈಫ್ ಗಾರ್ಡ್ ಗಳು ಹರಸಾಹಸ ಪಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular