ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಕರೆದುಕೊಂಡು ಬರಲು ಉದ್ದೇಶಿಸಲಾಗಿದ್ದು, ಅರ್ಹ ಯಾತ್ರಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸೆ.30 ರಿಂದ ಅ.04 ರ ವರೆಗೆ ಕೆಕೆಆರ್ಟಿಸಿ, ಇತರೆ ಸಾರಿಗೆ ಬಸ್ ಮತ್ತು ರೈಲಿನ ಮೂಲಕ ಕರೆದುಕೊಂಡು ಹೋಗಿಬರಲಾಗುತ್ತದೆ.ದೀಕ್ಷಾಭೂಮಿ ನಾಗಪುರಕ್ಕೆ ಹೋಗಬಯಸುವ ಯಾತ್ರಾರ್ಥಿಗಳು ಸೆ.09 ರ ವರೆಗೆ ಆನ್ಲೈನ್ ಮೂಲಕ ಇಲಾಖೆಯ ವೆಬ್ಸೈಟ್ https://swdservices.karnataka.gov.in ನಲ್ಲಿ ಸಲ್ಲಿಸಬಹುದು.
ಸಲ್ಲಿಸಿದ ಅರ್ಜಿಗಳನ್ನು ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಪ್ರತಿಗಳೊಂದಿಗೆ ಸಂಬಂಧಪಟ್ಟ ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ದೀಕ್ಷಾಭೂಮಿ