HomeLatest NewsJOB ALERT : ಲಿಪಿಕ ಸಿಬ್ಬಂದಿಯ ತಾತ್ಕಾಲಿಕ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

JOB ALERT : ಲಿಪಿಕ ಸಿಬ್ಬಂದಿಯ ತಾತ್ಕಾಲಿಕ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ಶಿವಮೊಗ್ಗ; ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಗೆ ಹೊರಗುತ್ತಿಗೆ ಆಧಾರದಲ್ಲಿ ಓರ್ವ ಲಿಪಿಕ ಸಿಬ್ಬಂದಿಯನ್ನು ಲಿಖಿತ ಪರೀಕ್ಷೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆರ್ಹರಿಂದ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿಯು ಸಂಪೂರ್ಣ ತಾತ್ಕಾಲಿಕವಾಗಿದ್ದು, 60 ವರ್ಷಗಳ ವಯೋಮಿತಿ ಮೀರದ ಮಾಜಿ ಸೈನಿಕರಿಗೆ ಮೀಸಲಾಗಿರುತ್ತದೆ. ಈ ನೇಮಕಾತಿಯು ಸರ್ಕಾರದ ಖಾಯಂ ಹುದ್ದೆಗೆ ಸಮನಾಗಿರುವುದಿಲ್ಲ ಮತ್ತು ಸೇವಾ ಖಾಯಮಾತಿಗೆ ಅವಕಾಶವಿರುವುದಿಲ್ಲ. ಕೇಂದ್ರ ಸಶಸ್ತ್ರ ಸೇನಾಪಡೆಗಳ ಯಾವುದಾದರೂ ಒಂದು ವಿಭಾಗದಲ್ಲಿ ಲಿಪಿಕ ನೌಕರರಾಗಿ ಸೇವೆ ಸಲ್ಲಿಸಿದ್ದು, ಸೇನಾಸೇವೆಯ ನಿವೃತ್ತಿ ನಂತರ ಕೇಂದ್ರ / ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಲಿಪಿಕ ನೌಕರರಾಗಿ ಖಾಯಂ / ಹಂಗಾಮಿಯಾಗಿ ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸಿದವರಿಗೆ, ಆದ್ಯತೆ ನೀಡಲಾಗುತ್ತದೆ. ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಸಂವಹನವು (ಬರೆಯಲು / ಓದಲು /ಮಾತನಾಡಲು) ಮತ್ತು ಗಣಕ ಯಂತ್ರದಲ್ಲಿ ಕನ್ನಡ / ಇಂಗ್ಲೀಷ್ ಬೆರಳಚ್ಚು ಪ್ರಾವೀಣ್ಯತೆಯು ಅತ್ಯಗತ್ಯವಾಗಿರುತ್ತದೆ.

ಆಸಕ್ತರು ದಿನಾಂಕ.07.07.2025 ರೊಳಗಾಗಿ ಅರ್ಜಿಯನ್ನು ತಮ್ಮ ಸ್ವಹಸ್ತಾಕ್ಷರದಲ್ಲಿ ಪೂರ್ಣ ಸ್ವವಿವರಗಳೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08182220925/ಸಂಪರ್ಕಿಸುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular