HomeUncategorizedಗಮನಿಸಿ : ಪೌರರಕ್ಷಣಾ ದಳದಲ್ಲಿ ಸ್ವಯಂ ಸೇವಕ ಸದಸ್ಯರಾಗಲು ಅರ್ಜಿ ಆಹ್ವಾನ

ಗಮನಿಸಿ : ಪೌರರಕ್ಷಣಾ ದಳದಲ್ಲಿ ಸ್ವಯಂ ಸೇವಕ ಸದಸ್ಯರಾಗಲು ಅರ್ಜಿ ಆಹ್ವಾನ

ಬಳ್ಳಾರಿ : ಪೌರರಕ್ಷಣಾ ದಳದಲ್ಲಿ ಸ್ವಯಂ ಸೇವಕರಾಗಿ ಸದಸತ್ವ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಕೃತಿ ವಿಕೋಪ, ವಿಪತ್ತು ನಿರ್ವಹಣೆ ಮತ್ತು ಮಾನವ ನಿರ್ಮಿತ ವಿಕೋಪಗಳ ಸಮಯದಲ್ಲಿ ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ಕಾಪಾಡುವ ಉದ್ದೇಶವಾಗಿದೆ. ಇಂತಹ ಸಾಮಾಜಿಕ ಕಾರ್ಯ ಮಾಡಲು ಇಚ್ಛಿಸುವ ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಸದಸ್ಯರಾಗುವ ಮೂಲಕ ಸೇವೆ ಸಲ್ಲಿಸಬಹುದು.

ಪೌರರಕ್ಷಣಾ ವಿಭಾಗದ ಸದಸ್ಯನಾಗಲು ಯಾವುದೇ ವಿದ್ಯಾರ್ಹತೆ ಇರುವುದಿಲ್ಲ. ಮಾಜಿ ಯೋಧರು ಮತ್ತು ನಿವೃತ್ತ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮುನ್ನೆಡೆಸಬಹುದು. ಈ ಸದಸ್ಯರು ಸಮಾಜ ಸೇವೆಯ ಭಾವನೆಯಿಂದ ಬರಬೇಕೆ ಹೊರತು ಅನ್ಯ ಭಾವನೆಗಳಿಂದ ಕೂಡಿರುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವ-ಇಚ್ಛೆಯಿಂದ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಯಾವುದೇ ಧನಸಹಾಯ ಇರುವುದಿಲ್ಲ. ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ರಸ್ತೆಯ ಜಿಲ್ಲಾ ಪೌರರಕ್ಷಣಾ ಕಚೇರಿಯಲ್ಲಿ ಜೂನ್ 05 ರವರೆಗೆ ಅರ್ಜಿ ವಿತರಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ದೂ.08392 276421 ಗೆ ಸಂಪರ್ಕಿಸಬಹುದು ಎಂದು ಪೌರರಕ್ಷಣಾ ದಳದ ಮುಖ್ಯ ವಾರ್ಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular