HomeKarnatakaJOB ALERT : 'ಸಖಿ ಒನ್ ಸ್ಟಾಪ್ ಸೆಂಟರ್' ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

JOB ALERT : ‘ಸಖಿ ಒನ್ ಸ್ಟಾಪ್ ಸೆಂಟರ್’ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ “ಸಖಿ” (ಒನ್ ಸ್ಟಾಪ್ ಸೆಂಟರ್) ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಆಪ್ತ ಸಮಾಲೋಚಕರು 01 ಹುದ್ದೆ, ಸಮಾಜ ಸೇವಾ ಕಾರ್ಯಕರ್ತೆಯರು 02 ಹುದ್ದೆ, ಕಾನೂನು ಸಲಹೆಗಾರರು- ವಕೀಲರು (ಪ್ಯಾರ ಲೀಗಲ್ ಹುದ್ದೆ) 01 ಹುದ್ದೆ ಹಾಗೂ ವಿವಿದೋದ್ದೇಶ ಸ್ವಚ್ಚತಗಾರರು 01 ಹುದ್ದೆಗೆ ಆಯ್ಕೆ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ

ಆಪ್ತ ಸಮಾಲೋಚಕರು ಹುದ್ದೆಗೆ ಎಂ.ಎಸ್.ಡಬ್ಯ್ಲೂ, ಸ್ನತಕೋತ್ತರ ಕಾನೂನು ಪದವಿ, ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ ಮತ್ತು ಫ್ಯಾಮಿಲಿ ರಿಲೇಷನ್ ) ಎಂ.ಎಸ್.ಸಿ ಸೈಕಾಲಜಿ, ಎಂ.ಎಸ್.ಸಿ ಸೈಕಿಯಾಟ್ರಿ ಸೇವೆಯಲ್ಲಿ ಸರ್ಕಾರಿ, ಸ್ವಯಂ ಸೇವಾಸಂಸ್ಥೆಗಳಲ್ಲಿ ಕನಿಷ್ಠ 03 ವರ್ಷಗಳ ಸಮಾಲೋಚನ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ , ಕನ್ನಡ, ಇಂಗ್ಲಿಷ್ ಬೆರಳಚ್ಚು, ಗೂಗಲ್ ಶೀಟ್ MS OFFICE ಹಾಗೂ ಪಿ.ಪಿ.ಟಿ ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಸಮಾಜ ಸೇವಾ ಕಾರ್ಯಕರ್ತೆಯರು ಹುದ್ದೆಗೆ ಬಿ.ಎಸ್. ಡಬ್ಲ್ಯೂ, ಬಿ.ಎ (ಸೋಷಿಯಾಲಜಿ ಮಹಿಳಾ ಅಧ್ಯಯನ) ಪದವಿ ಹೊಂದಿರಬೇಕು. ಸರ್ಕಾರಿ, ಸ್ವಯಂ ಸೇವಾಸಂಸ್ಥೆಗಳಲ್ಲಿ ಕನಿಷ್ಠ 02 ವರ್ಷಗಳ ಸಮಾಜ ಕಾರ್ಯ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ , ಕನ್ನಡ, ಇಂಗ್ಲಿಷ್ ಬೆರಳಚ್ಚು, ಗೂಗಲ್ ಶೀಟ್ MS OFFICE ಹಾಗೂ ಪಿ.ಪಿ.ಟಿ ಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ವಕೀಲರು (ಪ್ಯಾರಾ ಲೀಗಲ್ ಹುದ್ದೆ) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು ಹಾಗೂ ಕಾನೂನು ಸೇವೆಯಲ್ಲಿ 2 ವರ್ಷ ಅನುಭವ ಇರಬೇಕು. ವಿವಿದೋದ್ದೇಶ ಸ್ವಚ್ಚತಗಾರರ / ಸೆಕ್ಯೂರಿಟಿ ಹುದ್ದೆಗೆ 7ನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಇರಬೇಕು. ವಯೋಮಿತಿ: 18 ರಿಂದ 45 ವರ್ಷ ಒಳಗಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸಕ್ತ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಉಪ ನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ. ಎಂ.ಎಚ್. ಮರಿಗೌಡ ರಸ್ತೆ, ಬೆಂಗಳೂರು ಇಲ್ಲಿ ಸೆಪ್ಟೆಂಬರ್ 20 ರ ಸಂಜೆ 5.30 ರೊಳಗಾಗಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 080-26578688 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular