ಯು.ಹೆಚ್.ಕ್ಯೂ. ಕೋಟಾದಡಿಯಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
17 ವರ್ಷ ಆರು ತಿಂಗಳಿಂದ 22 ವರ್ಷದೊಳಗಿನ ವೀರನಾರಿಯರು, ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ತಮ್ಮಂದಿರುಗಳಿಗೆ ಆ.29 ರಿಂದ ಅ.11 ರವರೆಗೆ ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಟೆಕ್ನಿಕಲ್ ಮತ್ತು ಕ್ರೀಡಾ ಕೋಟಾದಡಿ ನೇಮಕಾತಿ ನಡೆಯಲಿದೆ.
ಆಸಕ್ತರು ಆ. 29 ರಂದು ಬೆಳಗ್ಗೆ 6 ಕ್ಕೆ ಮಿಲ್ಕಾ ಸಿಂಗ್ ಕ್ರೀಡಾಂಗಣ, 1 ಟ್ರೈನಿಂಗ್ ಬೆಟಾಲಿಯನ್, ಇ.ಎಂ.ಇ.ಸೇನಾ ತರಬೇತಿ ಸೆಂಟರ್, ಸಿಕಂದರಾಬಾದ್, ತೆಲಂಗಾಣ ಇಲ್ಲಿ ಹಾಜರಾಗಬೇಕು.
ಇ.ಎಂ.ಇ. ಟ್ರೈನಿಂಗ್ ಸೆಂಟರ್, ಸಿಕಂದರಾಬಾದ್ ಇಲ್ಲಿ ಯುಹೆಚ್‍ಕ್ಯೂ ಕೋಟಾದಡಿಯಲ್ಲಿ 22 ವರ್ಷದೊಳಗಿನ ವೀರ ನಾರಿಯರು, ಸೈನಿಕರು, ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ತಮ್ಮಂದಿರುಗಳಿಗೆ ಅಕ್ಟೋಬರ್ 11 ರವರೆಗೆ ಅಗ್ನಿಪಥ್ ಯೋಜನೆಯಡಿ ಆಗ್ನಿವೀರ್ ಟ್ರೇಡ್‍ಮನ್, ಅಗ್ನಿವೀರ್ ಟೆಕ್ನಿಕಲ್ (ತಾಂತ್ರಿಕ) ಮತ್ತು ಕ್ರೀಡಾ ಕೋಟಾದಡಿ ನೇಮಕಾತಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 04027-863016 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

