HomeKarnatakaಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಶುಭ ಸುದ್ದಿ: ನ್ಯೂ ಇಂಡಿಯಾ ಅಶುರನ್ಸ್ ಕಂಪನಿಯಲ್ಲಿ 500 ಅಸಿಸ್ಟೆಂಟ್ ಹುದ್ದೆಗಳಿಗೆ...

ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಶುಭ ಸುದ್ದಿ: ನ್ಯೂ ಇಂಡಿಯಾ ಅಶುರನ್ಸ್ ಕಂಪನಿಯಲ್ಲಿ 500 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ

ಮಡಿಕೇರಿ: ನ್ಯೂ ಇಂಡಿಯಾ ಅಶುರನ್ಸ್ ಕಂಪನಿ ಲಿಮಿಟೆಡ್ ನಲ್ಲಿರುವ 500 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

21 ರಿಂದ 30 ವರ್ಷದೊಳಗಿನ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು 2025 ರ ಜನವರಿ 1 ರೊಳಗೆ ವೆಬ್‍ಸೈಟ್ ವಿಳಾಸ https://www.newindia.co.in/ ಕ್ಕೆ ಭೇಟಿ ನೀಡಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ನ್ಯೂ ಇಂಡಿಯಾ ಅಶುರನ್ಸ್ ಕಂಪನಿಯ 500 ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಡಿಸೆಂಬರ್ 27 ರಂದು ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಕೃಷಿಕ್ ಸರ್ವೋದಯ ಫೌಂಡೇಶನ್‍ನಲ್ಲಿ ಈ ನೇಮಕಾತಿ ಪರೀಕ್ಷೆ ಹಾಗೂ ವಿವಿಧ ಬ್ಯಾಂಕ್ ಮತ್ತು ಇನ್ಶುರೆನ್ಸ್ ಕಂಪನಿಗಳ ನೇಮಕಾತಿ ಪರೀಕ್ಷೆಗಳ ಬಗ್ಗೆ ಉಚಿತ ಜಾಗೃತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗೆ 8660217739 ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಬಹುದಾಗಿದೆ ಎಂದು ಕೃಷಿಕ್ ಸರ್ವೋದಯ ಫೌಂಡೇಶನ್ ಗೌರವ ಕಾರ್ಯದರ್ಶಿ ತಿಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular