HomeLatest Newsನಾಗರಿಕ ಸೇವಾ ಕೇಂದ್ರ / ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನ

ನಾಗರಿಕ ಸೇವಾ ಕೇಂದ್ರ / ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನ

ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ 14 ಗ್ರಾಮ ಪಂಚಾಯತ್’ಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಪ್ರಾಂಚೈಸಿಗಳಿಂದ ಇಡಿಸಿಎಸ್, ಬೆಂಗಳೂರಿನಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ನಾಲ್ಕೇರಿ, ಕೆ.ಬಾಡಗ, ಬಲ್ಯಮಂಡೂರು, ನಿಟ್ಟೂರು, ದೇವರಪುರ ಮತ್ತು ಟಿ.ಶೆಟ್ಟಿಗೇರಿ, ಮಡಿಕೇರಿ ತಾಲ್ಲೂಕಿನ ಹಾಕತ್ತೂರು, ಮಕ್ಕಂದೂರು, ಕರಿಕೆ, ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು, ಅಮ್ಮತ್ತಿ ಮತ್ತು ಕದನೂರು.ಆಸಕ್ತ ಪ್ರಾಂಚೈಸಿಗಳು https://kal-mys.gramaone.karnataka.gov.in/ ಲಿಂಕ್ನ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ, 15 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ [email protected] ಈ-ಮೇಲ್ ಐಡಿಯನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ತಿಳಿಸಿದ್ದಾರೆ.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2018-19ನೇ ಸಾಲಿನ ಪ್ರಕೃತಿ ವಿಕೋಪದಲ್ಲಿ ವಾಸದ ಮನೆ ಹಾನಿಯಾದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ನಿರ್ಮಿಸಿ, ಲಭ್ಯವಿರುವ 252 ಮನೆಗಳ ಪೈಕಿ 251 ಮನೆಗಳನ್ನು ಸಂ:ಪುನರ್ವಸತಿ/228/2018-19 ದಿ:19-2-2025 ರಂತೆ ಹಂಚಿಕೆ ಮಾಡಲಾಗಿದೆ.

ದಿ:19-02-2025ರ ಆದೇಶದಂತೆ ಮನೆ ಹಂಚಿಕೆ ಮಾಡಲಾಗಿದ್ದ ಪ್ರಕರಣಗಳನ್ನು ಗ್ರಾಮ ಆಡಳಿತ ಅಧಿಕಾರಿಯವರ ವರದಿ, ಕಂದಾಯ ಪರಿವೀಕ್ಷಕರ ವರದಿ, ಅಭಿಯಂತರರ ವರದಿ, ಪೌರಾಯುಕ್ತರ ವರದಿ, ಹಿರಿಯ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರವರ ವರದಿ ಹಾಗೂ ತಹಶೀಲ್ದಾರರ ಪುನರ್ ಪರಿಶೀಲನಾ ವರದಿಯ ಆಧಾರದ ಮೇರೆಗೆ 2026ರ ಜನವರಿ 30 ರಂದು ಸಭೆ ನಡೆಸಲಾಗಿದ್ದು, 251 ಪ್ರಕರಣಗಳ ಬಗ್ಗೆ ಪ್ರತ್ಯೇಕವಾಗಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಒಟ್ಟು 136 ಅರ್ಹ ಫಲಾನುಭವಿ ಹಾಗೂ 115 ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ.
ಈ ಸಂಬಂಧ ಆಯಾಯ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಫೆಬ್ರುವರಿ 13 ರ ವರೆಗೆ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ಪುನರ್ವಸತಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular