ಧಾರವಾಡ : ಅಮ್ಮಿನಭಾವಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರಿಗೆ ಫಿಟ್ಟರ್ ಮತ್ತು ಎಲೆಕ್ಟ್ರೀಷಿಯನ್ ವೃತ್ತಿಗಳಿಗೆ ಆಗಷ್ಟ್-2025 ನೇ ಸಾಲಿಗೆ ಐ.ಟಿ.ಐ ಪ್ರವೇಶಕ್ಕಾಗಿ (ಸಿಟಿಎಸ್ ವಿಭಾಗ) ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ (ಮೆರಿಟ್ ಕಮ್ ರಿಸರ್ವೇಷನ್) ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಮೇ 28, 2025 ರೊಳಗಾಗಿ ವೆಬ್‍ಸೈಟ್ www.cite.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2782433 ಗೆ ಸಂಪರ್ಕಿಸಬಹುದು ಎಂದು ಅಮ್ಮಿನಭಾವಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
You Might Also Like
TAGGED:ಐ.ಟಿ.ಐ ಪ್ರವೇಶ