ಹಾಸನ : ಜವಾಹರ ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಈಗಾಗಲೇ ಅಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆ.27 ವರೆಗೆ ವಿಸ್ತರಿಸಲಾಗಿದೆ.
https://cbseitms.rcil.gov.in/nvs ವೆಬ್ ಸೈಟ್ ಮೂಲಕ ಅರ್ಜಿಯನ್ನು ಹಾಸನ ಜಿಲ್ಲೆಯಲ್ಲಿ, 2025-26 ನೇ ಸಾಲಿನಲ್ಲಿ, ಸರ್ಕಾರಿ/ಸರ್ಕಾರಿ ಮಾನ್ಯತೆ ಪಡೆದ ಶಾಲೆಗಳಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೊಂದಾಯಿಸಬಹುದಾಗಿರುತ್ತದೆ ಎಂದು ಪಿಎಂ ಶ್ರೀ ಸ್ಕೂಲ್ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.
You Might Also Like
TAGGED:ನವೋದಯ ವಿದ್ಯಾಲಯ