HomeKarnatakaSC/ST ಉದ್ದಿಮೆದಾರರಿಂದ ಸಣ್ಣ ಮತ್ತು ಅತಿ ಸಣ್ಣ ಜವಳಿ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

SC/ST ಉದ್ದಿಮೆದಾರರಿಂದ ಸಣ್ಣ ಮತ್ತು ಅತಿ ಸಣ್ಣ ಜವಳಿ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ನೇಕಾರರ ವಿಶೇಷ ಪ್ಯಾಕೇಜ್ ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಣ್ಣ ಮತ್ತು ಅತಿ ಸಣ್ಣ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ದಿಮೆದಾರರು ಹೊಸದಾಗಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತಹ ಘಟಕ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ.

ಜವಳಿ ಘಟಕಗಳಲ್ಲಿ ಶೇ.75 ರಷ್ಟು ಅಥವಾ ಗರಿಷ್ಟ ರೂ 2.00 ಕೋಟಿಗಳವರೆಗೆ ಸಹಾಯಧನ ಪಡೆಯಬಹುದು. ಆಸಕ್ತ ಜವಳಿ ಉತ್ಪಾದನಾ ಉದ್ದಿಮೆದಾರರು ಅವಶ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ 7 ರ ರೊಳಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಛೇರಿಗೆ ಅರ್ಜಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಮಂಜುನಾಥ ಟವರ್ಸ್, 2ನೇ ಮಹಡಿ, ಗಾಂಧಿನಗರ, 1ನೇ ಮುಖ್ಯರಸ್ತೆ, ಶಿವಮೊಗ್ಗ ಕಛೇರಿಗೆ ಭೇಟಿ ನೀಡಬಹುದಾಗಿರುತ್ತದೆ. ಅಥವಾ ಕಛೇರಿಯ ದೂರವಾಣಿ ಸಂಖ್ಯೆ 08182223405 ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular