ಹಸಿಮೆಣಸಿನಕಾಯಿ ಬಳಕೆಯಿಂದ ಅಡುಗೆ ಸ್ವಾದ ಹೆಚ್ಚಿಸುವುದರ ಜೊತೆಗೆ ದೇಹಕ್ಕೆ ಸಿಗಲಿದೆ ಅನೇಕ ಬಗೆಯ ಲಾಭ

ಭಾರತೀಯ ಆಹಾರ ಪದ್ಧತಿಯಲ್ಲಿ ಹಸಿಮೆಣಸನ್ನ ಬಳಕೆ ಮಾಡಿಯೇ ಮಾಡ್ತಾರೆ. ಇದು ಅಡುಗೆಗೆ ರುಚಿ ಕೊಡುತ್ತೆ ನಿಜ. ಹಾಗಂತ ಹಸಿಮೆಣಸು ನನ್ನಿಷ್ಟದ ತರಕಾರಿ ಎಂಬವರು ನಿಮಗ್ಯಾರೂ ಸಿಗಲಿಕ್ಕಿಲ್ಲ. ಆದರೆ ಈ ಹಸಿಮೆಣಸು ಅಡುಗೆಯ ಸ್ವಾದವನ್ನ ಹೆಚ್ಚಿಸೋದ್ರ ಜೊತೆಗೆ ದೇಹದ ಆರೋಗ್ಯವನ್ನೂ ಕಾಪಾಡುವ ಕೆಲಸ ಮಾಡುತ್ತೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಹಸಿಮೆಣಸಿನಕಾಯಿಯನ್ನ ಸೇವಿಸೋದು ತುಂಬಾನೇ ಒಳ್ಳೆಯದು. ಹಸಿಮೆಣಸಿನ ಕಾಯಿಗೆ ರಕ್ತ ಹೆಪ್ಪುಗಟ್ಟೋದನ್ನ ನಿಯಂತ್ರಿಸುವ ಶಕ್ತಿ ಇದೆ.

ಇದು ನಿಮ್ಮ ದೇಹದ ಜೀರ್ಣಶಕ್ತಿಯನ್ನ ಸುಧಾರಿಸುವ ಕೆಲಸ ಮಾಡುತ್ತೆ. ಹಸಿಮೆಣಸಿನಕಾಯಿಯಲ್ಲಿ ಫೈಬರ್​ ಅಂಶ ಹೆಚ್ಚಾಗಿದ್ದು ಇದರಿಂದ ತಿಂದ ಆಹಾರ ಬಹುಬೇಗನೆ ಜೀರ್ಣವಾಗುತ್ತೆ. ಸಂಧಿವಾತದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಹಸಿಮೆಣಸಿನ ಕಾಯಿ ಸೇವನೆ ಒಳ್ಳೆಯದು.

ಹಸಿ ಮೆಣಸಿನ ಕಾಯಿಗಳಲ್ಲಿ ವಿಟಮಿನ್​ ಸಿ ಅಂಶ ಹೇರಳವಾಗಿರುತ್ತೆ. ಇದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಧೂಮಪಾನಿಗಳು ಸಹ ಹಸಿಮೆಣಸಿನಕಾಯಿಗಳನ್ನ ತಮ್ಮ ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ತುಂಬಾನೇ ಒಳ್ಳೆಯದು. ಯಾಕೆಂದ್ರೆ ಧೂಮಪಾನಿಗಳಿಗೆ ಶ್ವಾಸಕೋಶದ ಕ್ಯಾನ್ಸರ್​ನ ಅಪಾಯ ಹೆಚ್ಚಿರೋದ್ರಿಂದ ಹಸಿಮೆಣಸಿನಕಾಯಿ ಸೇವನೆ ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read