HomeCrimeSHOCKING: ತಂದೆಯ ಹಣ, ಪಿಂಚಣಿಗಾಗಿ ಸೋದರರನ್ನೇ ಹತ್ಯೆ ಮಾಡಿದ ಯುವತಿ

SHOCKING: ತಂದೆಯ ಹಣ, ಪಿಂಚಣಿಗಾಗಿ ಸೋದರರನ್ನೇ ಹತ್ಯೆ ಮಾಡಿದ ಯುವತಿ

ಇಂದಿನ ಆಧುನಿಕ ಕಾಲದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಒಡಹುಟ್ಟಿದವರು, ತನ್ನವರು ಎಂಬ ಪ್ರೀತಿ ಇಲ್ಲದೇ ಹಣಕ್ಕಾಗಿ ಪ್ರಾಣ ತೆಗೆಯುವ ಕೃತ್ಯಕ್ಕಿಳಿಯುತ್ತಿದ್ದಾರೆ. ಇಂಥದ್ದೇ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ತಂದೆಯ ಆಸ್ತಿ ಮತ್ತು ಪಿಂಚಣಿ ಪಡೆಯಲು ಮಹಿಳೆ ತನ್ನ ಸೋದರರನ್ನೇ ಹತ್ಯೆ ಮಾಡಿದ್ದಾಳೆ.

ಪಲ್ನಾಡು ಜಿಲ್ಲೆಯ ನಕರಿಕಲ್ಲು ಯಾನಾಡಿ ಕಾಲೋನಿ ನಿವಾಸಿ ಪೌಳಿರಾಜು ಅವರು ನಕರಿಕಲ್ಲು ಗಿರಿಜನ ಕಲ್ಯಾಣ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿದ್ದು, ಸರ್ಕಾರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವಾಗ ಈ ವರ್ಷದ ಜನವರಿಯಲ್ಲಿ ಪಾರ್ಶ್ವವಾಯು ರೋಗದಿಂದ ನಿಧನರಾಗಿದ್ದರು.

ಬೊಳ್ಳಪಲ್ಲಿ ಮಂಡಲದ ಬಂಡ್ಲಮೋಟು ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಪೌಳಿರಾಜು ಅವರ ಪುತ್ರರಲ್ಲಿ ಒಬ್ಬರಾದ ಗೋಪಿಕೃಷ್ಣ ಅವರು ಕೆಲವು ದಿನಗಳಿಂದ ಕೆಲಸಕ್ಕೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಸೋದರರ ಹತ್ಯೆಯ ಘಟನೆ ಬೆಳಕಿಗೆ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಹೋದರರಾದ ಗೋಪಿಕೃಷ್ಣ, ದುರ್ಗಾ ರಾಮಕೃಷ್ಣ ಮತ್ತು ಸೋದರಿ ಕೃಷ್ಣವೇಣಿ ತಮ್ಮ ತಂದೆಯ ಪಿಂಚಣಿ ಮತ್ತು ಆಸ್ತಿಯ ಹಕ್ಕನ್ನು ಯಾರಿಗೆ ನೀಡಬೇಕು ಎಂಬ ವಿಷಯದಲ್ಲಿ ಪೈಪೋಟಿ ಹೊಂದಿದ್ದರು. ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ನಂತರ, ತಮ್ಮ ತಂದೆಗೆ ಸರ್ಕಾರದಿಂದ ಕನಿಷ್ಠ 40 ಲಕ್ಷ ರೂ. ಬರುತ್ತದೆ ಎಂದು ನಂಬಿದ್ದರು.

ಕೃಷ್ಣವೇಣಿ ನಾನು ತಂದೆಯನ್ನು ನೋಡಿಕೊಂಡಿದ್ದೇನೆ ಹಾಗಾಗಿ ಅವರ ತಂದೆಯ ಪಿಂಚಣಿಗೆ ಅರ್ಹಳು ಎಂದು ಹೇಳಿಕೊಂಡರೆ, ಆಕೆಯ ಸಹೋದರರು ತಾವು ಆಸ್ತಿ, ಹಣವನ್ನು ಹಂಚಿಕೊಳ್ಳಲು ಅರ್ಹರು ಎಂದು ಹೇಳಿದ್ದರು. ಕೃಷ್ಣವೇಣಿ, ಗ್ರಾಮದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದು, ಆತನ ನೆರವಿನಿಂದ ತನ್ನ ಸಹೋದರರನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 26ರಂದು ನಕರಿಕಲ್ಲು ಬಳಿ ತನ್ನ ಕಿರಿಯ ಸಹೋದರ ರಾಮಕೃಷ್ಣನನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಳು. ಈ ತಿಂಗಳ 10 ರಂದು ಆಕೆ ತನ್ನ ಅಣ್ಣ ಗೋಪಿಕೃಷ್ಣನನ್ನು ಹಗ್ಗದಿಂದ ಕತ್ತು ಹಿಸುಕಿ ಶವವನ್ನು ವಿಲೇವಾರಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಕೃಷ್ಣವೇಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular