HomeEntertainmentಆಗಸ್ಟ್ 23ಕ್ಕೆ ತೆರೆ ಕಾಣಲಿದೆ 'ಅನರ್ ಕಲಿ'

ಆಗಸ್ಟ್ 23ಕ್ಕೆ ತೆರೆ ಕಾಣಲಿದೆ ‘ಅನರ್ ಕಲಿ’

ಕಿರುತೆರೆ ನಟ ಶೋಭರಾಜ್ ಪಾವೂರ್ ಅಭಿನಯದ ರೋಮ್ಯಾಂಟಿಕ್ ಡ್ರಾಮಾ  ಕಥಾಧಾರಿತ ‘ಅನರ್ ಕಲಿ’ ಎಂಬ ತುಳು ಚಿತ್ರ ಮುಂದಿನ ತಿಂಗಳು ಆಗಸ್ಟ್ 23ಕ್ಕೆ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಹರ್ಷಿತ್ ಸೋಮೇಶ್ವರ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶೋಭರಾಜ್ ಪಾವೂರ್ ಸೇರಿದಂತೆ ಮಧುರ ಆರ್‌ಜೆ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಬಣ್ಣ ಹಚ್ಚಿದ್ದಾರೆ. ಲಕುಮಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಯಶೋಧ ಸಂಜೀವ ಹಾಗೂ ಲಂಚು ಲಾಲ್ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ಸುವರ್ಣ ಸಂಕಲನ, ಅರುಣ್ ರಾಯ್ ಪುತ್ತೂರು ಹಾಗೂ ಅನಿಲ್ ಕುಮಾರ್ ಅವರ ಛಾಯಾಗ್ರಹಣವಿದೆ. ಇನ್ನುಳಿದಂತೆ ರೋಹಿತ್ ಪೂಜಾರಿ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular