HomeKarnatakaಆನ್ಲೈನ್ ಬೆಟ್ಟಿಂಗ್ ವಿರೋಧಿ ಕಾರ್ಯಾಚರಣೆ: 8750 ಬೆಟ್ಟಿಂಗ್ ವೆಬ್ಸೈಟ್, ಮೊಬೈಲ್ ಆ್ಯಪ್ ಬಂದ್

ಆನ್ಲೈನ್ ಬೆಟ್ಟಿಂಗ್ ವಿರೋಧಿ ಕಾರ್ಯಾಚರಣೆ: 8750 ಬೆಟ್ಟಿಂಗ್ ವೆಬ್ಸೈಟ್, ಮೊಬೈಲ್ ಆ್ಯಪ್ ಬಂದ್

ಬೆಂಗಳೂರು: ರಾಜ್ಯ ಸೈಬರ್ ಕಮಾಂಡ್ ಘಟಕ, ಇಂಡಿಯನ್ ಸೈಬರ್ ಕ್ರೈಂ ಕೋ ಆರ್ಡಿನೇಷನ್ ಸೆಂಟರ್ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ದೇಶಾದ್ಯಂತ 8750 ಅಕ್ರಮ ಬೆಟ್ಟಿಂಗ್ ವೆಬ್ಸೈಟ್ ಗಳು, ಮೊಬೈಲ್ ಅಪ್ಲಿಕೇಶನ್ ಗಳು, ಬೆಟ್ಟಿಂಗ್ ಯು.ಆರ್.ಎಲ್. ಜಾಲಪತ್ತೆ ಹಚ್ಚಿ ಬಂದ್ ಮಾಡುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗೆ ಐಪಿಎಲ್ ಪಂದ್ಯಾವಳಿ ವೇಳೆ ರಾಜ್ಯ ಸೈಬರ್ ಕಮಾಂಡ್ ಘಟಕ ಈ ಕಾರ್ಯಾಚರಣೆ ನಡೆಸಿದೆ. ಗುಪ್ತಚರ ಮಾಹಿತಿ ಆಧರಿಸಿ ವಿಶೇಷ ತಂಡಗಳು ತನಿಖೆ ಕೈಗೊಂಡು ಕ್ರಿಕೆಟ್ ಬೆಟ್ಟಿಂಗ್ ವೇದಿಕೆಗಳನ್ನು ನಿರ್ವಹಿಸುತ್ತಿದ್ದ ಸಂಘಟಿತ ಗುಂಪುಗಳನ್ನು ಪತ್ತೆ ಮಾಡಿವೆ.

ಈ ವೇದಿಕೆಗಳು ಮಿರರ್ ಡೊಮೇನ್ ಗಳು, ನಕಲಿ ಡೊಮೇನ್ ಗಳು ಮತ್ತು ನಕಲಿ ಯು.ಆರ್.ಎಲ್.ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಟ್ಟಿಂಗ್ ಜಾಲಗಳ ಪರಿಣಾಮ ಸಾವಿರಾರು ನಾಗರೀಕರು ಆರ್ಥಿಕ ಸಂಕಷ್ಟ, ವೈಯಕ್ತಿಕ ಮಾಹಿತಿ ಸೋರಿಕೆ, ಮಾನಸಿಕ ಕಿರುಕುಳ, ಸಾಲದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದರು.

ಕಾರ್ಯಾಚರಣೆ ನಡೆಸಿ ಇವನ್ನು ತಡೆಯಲಾಗಿದೆ. ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿದ್ದ 8750 ವೆಬ್ಸೈಟ್ ಗಳು, ಮೊಬೈಲ್ ಅಪ್ಲಿಕೇಶನ್ ಗಳನ್ನು ಸೈಬರ್ ಕಮಾಂಡ್ ಕೇಂದ್ರ ಬಂದ್ ಮಾಡಿಸಿದೆ. ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ ಪ್ರಣವ್ ಮೊಹಾಂತಿ, ಡಿಐಜಿಪಿ ಹೆಚ್.ಡಿ. ಆನಂದಕುಮಾರ್ ನೇತೃತ್ವದಲ್ಲಿ ಸೈಬರ್ ಪೋಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular