HomeEntertainment'ಉಸಿರೇ.. ಉಸಿರೇ...' ಚಿತ್ರದ ಮತ್ತೊಂದು ಹಾಡು ರಿಲೀಸ್

‘ಉಸಿರೇ.. ಉಸಿರೇ…’ ಚಿತ್ರದ ಮತ್ತೊಂದು ಹಾಡು ರಿಲೀಸ್

ರಾಜೀವ್ ಅಭಿನಯದ ಬಹುನಿರೀಕ್ಷಿತ ‘ಉಸಿರೇ.. ಉಸಿರೇ…’ ಚಿತ್ರದ ”ಚಂದಿರನ” ಎಂಬ  ರೋಮ್ಯಾಂಟಿಕ್ ಮೆಲೋಡಿ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಕಾರ್ತಿಕ್ ಧ್ವನಿಯಾಗಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ. ವಿಜಯ್ ಸಿ ಎಂ ಅವರ ಸಾಹಿತ್ಯವಿದೆ.

ಸಿಎಂ ವಿಜಯ್ ಆಕ್ಷನ್ ಕಟ್ ಹೇಳಿರುವ ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರದಲ್ಲಿ  ರಾಜೀವ್ ಅನು ಮತ್ತು ಶ್ರೀಜಿತಗೋಷ್   ಪ್ರಮುಖ ಪಾತ್ರದಲ್ಲಿದ್ದು, ಸುಚೇಂದ್ರ ಪ್ರಸಾದ್, ತಾರಾ, ರಾಜೇಶ್ ನಟರಂಗ, ಸಾಧುಕೋಕಿಲ, ದೇವರಾಜ್, ಬ್ರಹ್ಮಾನಂದಂ, ಮಂಜು ಪಾವಗಡ,  ಜಗ್ಗಪ್ಪ, ಸುಶ್ಮಿತಾ,  ನಿಕಿತಾ, ಸೀತಾರಾಮ್, ವಿಜಯ್, ಪ್ರೀತಮ್ ತೆರೆ ಹಂಚಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗೊಂಬೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ, ಕೆ ಎಂ ಪ್ರಕಾಶ್ ಸಂಕಲನ, ಮಂಜು ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular