HomeEntertainmentನವೆಂಬರ್ 1ಕ್ಕೆ ಬಿಡುಗಡೆಯಾಗಲಿದೆ 'ಶುಗರ್ ಫ್ಯಾಕ್ಟರಿ' ಚಿತ್ರದ ಮತ್ತೊಂದು ಹಾಡು

ನವೆಂಬರ್ 1ಕ್ಕೆ ಬಿಡುಗಡೆಯಾಗಲಿದೆ ‘ಶುಗರ್ ಫ್ಯಾಕ್ಟರಿ’ ಚಿತ್ರದ ಮತ್ತೊಂದು ಹಾಡು

ಡಾರ್ಲಿಂಗ್ ಕೃಷ್ಣ ಅಭಿನಯದ ದೀಪಕ್ ಅರಸ್ ನಿರ್ದೇಶನದ ‘ಶುಗರ್ ಫ್ಯಾಕ್ಟರಿ’ ಸಿನಿಮಾ ನವೆಂಬರ್ 24ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡ ಇದಕ್ಕೂ ಮುಂಚೆ ಲಿರಿಕಲ್ ಸಾಂಗ್ ಒಂದನ್ನು ರಿಲೀಸ್ ಮಾಡಲು ನಿರ್ಧರಿಸಿದೆ. ನವೆಂಬರ್ 1 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ

ಬಾಲಮಣಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಆರ್. ಗಿರೀಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಸೇರಿದಂತೆ ಸೋನಾಲ್ ಮಂಟೈರಾ, ಅದ್ವಿತಿ ಶೆಟ್ಟಿ, ರೂಹಾನಿ ಶೆಟ್ಟಿ, ಹಾಗೂ ರಂಗಾಯಣ ರಘು ತೆರೆ ಹಂಚಿಕೊಂಡಿದ್ದಾರೆ. ಸಂತೋಷ್ ಛಾಯಾಗ್ರಹಣವಿದ್ದು, ಪ್ರಕಾಶ್ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular