HomeEntertainment'supplier ಶಂಕರ' ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 14 ಕ್ಕೆ ರಿಲೀಸ್

‘supplier ಶಂಕರ’ ಚಿತ್ರದ ಮತ್ತೊಂದು ಹಾಡು ಸೆಪ್ಟೆಂಬರ್ 14 ಕ್ಕೆ ರಿಲೀಸ್

ರಂಜಿತ್ ಸಿಂಗ್ ನಿರ್ದೇಶನದ ಆಕ್ಷನ್ ಲವ್ ಸ್ಟೋರಿ ಕಥಾ ಹಂದರ ಹೊಂದಿರುವ supplier ಶಂಕರ ಚಿತ್ರದ ನಾಯಕಿಯ ಪಾತ್ರದ ಪರಿಚಯವನ್ನು ಇತ್ತೀಚಿಗೆ ಮಾಡಲಾಗಿತ್ತು.‌ ಇದೀಗ ಈ ಸಿನಿಮಾದ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

‘ಮಾಡೋ ಕೆಲಸವ ನೀನು ಮರೆಸಿದೆ’ ಎಂಬ ಈ ಮೆಲೋಡಿ ಹಾಡಿಗೆ ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೇ ಸೆಪ್ಟೆಂಬರ್ 14 ರಂದು ಬೆಳಿಗ್ಗೆ 11:23 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ  ರಿಲೀಸ್ ಆಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಸಿ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಾರ್ ಸಪ್ಲೈಯರ್ ಹಾಗೂ ಶಾಲಾ ಶಿಕ್ಷಕಿಯ ನಡುವಿನ ಪ್ರೇಮ ಕಥೆ ಇದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular