HomeEntertainment'ಕುಬುಸ' ಚಿತ್ರದಿಂದ ಬರಲಿದೆ ಮತ್ತೊಂದು ಗೀತೆ

‘ಕುಬುಸ’ ಚಿತ್ರದಿಂದ ಬರಲಿದೆ ಮತ್ತೊಂದು ಗೀತೆ

ತನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಘುರಾಮ್ ಚರಣ್ ನಿರ್ದೇಶನದ ಕುಬುಸ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ”ಅರೆರೆ ಅರೆರೆ ತಂಗಾಳಿಯ ಕಂಡೆ” ಎಂಬ ಈ ಹಾಡಿಗೆ ವಾಸುಕಿ ವೈಭವ್ ಧ್ವನಿಯಾಗಿದ್ದಾರೆ. ದುನಿಯಾ ವಿಜಯ್ ಈ ಹಾಡನ್ನು ಬಿಡುಗಡೆ ಮಾಡಲಿದ್ದು, ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕುಂ.ವೀರಭದ್ರಪ್ಪ ಕಥೆಯಾಧಾರಿತ ಈ ಚಿತ್ರವನ್ನು ವಿ ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ ಶೋಭಾ ನಿರ್ಮಾಣ ಮಾಡಿದ್ದು, ನಟರಾಜ ಎಸ್ ಭಟ್  ಸೇರಿದಂತೆ ಮಹಾಲಕ್ಷ್ಮಿ, ಮಂಜಮ್ಮ ಜೋಗತಿ, ಹನುಮಕ್ಕ, ಅನಿಕಾ ರಮ್ಯಾ, ಮಂಜು ಗೌಡ , ಹುಲಿಗೆಪ್ಪ ಕಟ್ಟಿಮನಿ ಬಣ್ಣ ಹಚ್ಚಿದ್ದಾರೆ. ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ ನೀಡಿದ್ದು, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ ಛಾಯಾಗ್ರಹಣ ಹಾಗೂ ರಘುರಾಮ್ ಚರಣ್ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular