HomeKarnatakaಬರದಿಂದ ತತ್ತರಿಸಿರುವ ರೈತರಿಗೆ ಮತ್ತೊಂದು ಶಾಕ್ : ಮೇವಿನ ಬೆಲೆ 3 ಪಟ್ಟು ಹೆಚ್ಚಳ!

ಬರದಿಂದ ತತ್ತರಿಸಿರುವ ರೈತರಿಗೆ ಮತ್ತೊಂದು ಶಾಕ್ : ಮೇವಿನ ಬೆಲೆ 3 ಪಟ್ಟು ಹೆಚ್ಚಳ!

ಬೆಂಗಳೂರು : ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಇದೀಗ ಮೇವಿನ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಮೇವಿನ ಬೆಲೆ ಮೂರು ಪಟ್ಟು ಹೆಚ್ಚಳವಾಗಿದೆ.

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೇವಿನ ಬೆಲೆಯಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಜಾನುವಾರು ಇರುವವರು ಸಂಕಷ್ಟ ಎದುರಿಸುವಂತಾಗಿದೆ. ರಾಗಿ ಹುಲ್ಲು ಪಿಂಡಿ 150 ರೂ.ನಿಂದ 200  ರೂ.ವರೆಗೆ ಇದ್ದದ್ದು, ಇದೀಗ 5,00 ರೂ.ನಿಂದ 600 ರೂ.ವರೆಗೆ ಮಾರಾಟವಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೋಳದ ಮೇವಿಗೆ ಒಟ್ಟು ಕಟ್ಟಿಗೆ 10 ರಿಂದ 12 ರೂ. ಇತ್ತು. ಇದೀಗ ಒಂದು ಕಟ್ಟಿಗೆ 30 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಸುಮಾರು 1.05 ಕೋಟಿ ಜಾನುವಾರುಗಳಿದ್ದು, ಅಧಿಕ ಮೇವಿನ ಅಗತ್ಯವಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಬರಗಾಲದಿಂದ 46.11 ಲಕ್ಷ ಹೆಕ್ಟೇರ್ ನಲ್ಲಿದ್ದ ಕೃಷಿ ಬೆಳೆಗಳು ಹಾನಿಗೊಳಗಾಗಿವೆ.

For Latest News Updates, Join Our Whatsapp Community🚩
RELATED ARTICLES

Most Popular