HomeLatest NewsSHOCKING : ಆಂಧ್ರದಲ್ಲಿ ಮತ್ತೋರ್ವ ನವವಿವಾಹಿತನ ಹತ್ಯೆ : ಲವರ್ ಜೊತೆ ಸೇರಿ ಪತಿಯನ್ನೇ ಕೊಲೆ...

SHOCKING : ಆಂಧ್ರದಲ್ಲಿ ಮತ್ತೋರ್ವ ನವವಿವಾಹಿತನ ಹತ್ಯೆ : ಲವರ್ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪಾಪಿ ಪತ್ನಿ.!

ಆಘಾತಕಾರಿ ಘಟನೆಯೊಂದರಲ್ಲಿ ಆಂಧ್ರದಲ್ಲಿ ಮತ್ತೋರ್ವ ನವವಿವಾಹಿತನ ಹತ್ಯೆ ನಡೆದಿದ್ದು,  ಪತಿ  ಹತ್ಯೆಗೆ ಪತ್ನಿಯೇ ಸ್ಕೆಚ್ ಹಾಕಿದ್ದಳು.

ಈ ಪ್ರಕರಣವು ಮೇಘಾಲಯದ ಮಧುಚಂದ್ರ ಕೊಲೆ ಪ್ರಕರಣಕ್ಕೆ ಹೋಲಿಕೆಗಳನ್ನು ಕಂಡಿದೆ. ಆರೋಪಿ ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಮೇಘಾಲಯದಲ್ಲಿ ತಮ್ಮ ಮಧುಚಂದ್ರದ ಸಮಯದಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಅದೇ ರೀತಿ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಕರ್ನೂಲ್ನ ಐಶ್ವರ್ಯಾ ಮೇ 18 ರಂದು ತೆಲಂಗಾಣದ ಜೋಗುಲಾಂಬ ಗಡ್ವಾಲ್ ಜಿಲ್ಲೆಯ ನಿವಾಸಿ ತೇಜೇಶ್ವರ್ (32) ಅವರನ್ನು ವಿವಾಹವಾಗಿದ್ದರು. ತೇಜೇಶ್ವರ್ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಮದುವೆಯನ್ನು ಫೆಬ್ರವರಿ 13 ರಂದು ನಿಗದಿಪಡಿಸಲಾಗಿತ್ತು. ಆದರೆ ಮದುವೆಗೆ ಕೇವಲ ಐದು ದಿನಗಳ ಮೊದಲು ಐಶ್ವರ್ಯಾ ನಾಪತ್ತೆಯಾಗಿದ್ದರು, ಅವರು ಕರ್ನೂಲ್ನ ಬ್ಯಾಂಕ್ ಉದ್ಯೋಗಿ ತಿರುಮಲ ರಾವ್ ಅವರೊಂದಿಗೆ ಓಡಿಹೋಗಿದ್ದಾರೆ ಎಂಬ ಊಹಾಪೋಹಗಳು ಹರಡಿತ್ತು. ತಿರುಮಲ ರಾವ್ ಅವರ ಅವರ ಪ್ರೇಮಿ ಎಂದು ಶಂಕಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫೆಬ್ರವರಿ 16 ರಂದು ಮನೆಗೆ ಹಿಂತಿರುಗಿದ ಐಶ್ವರ್ಯ, ತಾನು ಯಾರೊಂದಿಗೂ ಸಂಬಂಧ ಹೊಂದಿಲ್ಲ ಎಂದು ತೇಜೇಶ್ವರ್ ಅವರನ್ನು ಮನವೊಲಿಸಿದಳು.. ತೇಜೇಶ್ವರ್ ಜೊತೆ ಮೇ 18 ರಂದು ಐಶ್ವರ್ಯ ವಿವಾಹವಾದರು. ಬರು ಬರುತ್ತಾ ತೊಂದರೆ ಪ್ರಾರಂಭವಾಯಿತು, ಐಶ್ವರ್ಯ ಫೋನ್ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಳು.
ಮದುವೆಯಾದ ಒಂದು ತಿಂಗಳೊಳಗೆ ಐಶ್ವರ್ಯಾ ತಿರುಮಲಕ್ಕೆ 2,000 ಕ್ಕೂ ಹೆಚ್ಚು ಫೋನ್ ಕರೆಗಳನ್ನು ಮಾಡಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ತೇಜೇಶ್ವರ್ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಭಾವಿಸಿದ ಪತ್ನಿ ಆತನನ್ನು ಕೊಲ್ಲಲು ಯೋಜನೆ ರೂಪಿಸಿದ್ದಳು . ಆತನ ಮರಣದ ನಂತರ ಆತನ ಆಸ್ತಿಯನ್ನು ಪಡೆದುಕೊಳ್ಳಬಹುದು ಎಂದು ಪ್ಲ್ಯಾನ್ ಮಾಡಿದ್ದಳು.
ತೇಜೇಶ್ವರ್ ಅವರನ್ನು ಕೊಲ್ಲಲು ತಿರುಮಲ ರಾವ್ ಗುತ್ತಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದಾಗಿ ವರದಿಯಾಗಿದೆ.

ಯೋಜನೆಯಂತೆ, ಜೂನ್ 17 ರಂದು 10 ಎಕರೆ ಭೂಮಿಯನ್ನು ಖರೀದಿಸುವ ನೆಪದಲ್ಲಿ ಕೆಲವು ವ್ಯಕ್ತಿಗಳು ತೇಜೇಶ್ವರ್ ಅವರನ್ನು ಭೇಟಿಯಾಗಿ ಸಮೀಕ್ಷೆ ನಡೆಸುವಂತೆ ಕೇಳಿಕೊಂಡರು. ಅವರು ಆತನನ್ನು ಗಡ್ವಾಲ್ನಿಂದ ಕಾರಿನಲ್ಲಿ ಕರೆದೊಯ್ದರು. ವಾಹನದೊಳಗೆ, ತೇಜೇಶ್ವರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಆತನ ಕತ್ತು ಸೀಳಿ, ಪಣ್ಯಂನ ಸುಗಲಿಮೆಟ್ಟು ಬಳಿ ಮೃತದೇಹವನ್ನು ವಿಲೇವಾರಿ ಮಾಡಿದರು. ಬ್ಯಾಂಕ್ ಉದ್ಯೋಗಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಈಗಾಗಲೇ ಐಶ್ವರ್ಯಾಳನ್ನುಬಂಧಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular