ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವ ಪತ್ತೆ: ಒಂದೇ ವಾರದಲ್ಲಿ ಮೂರನೇ ಘಟನೆ

ನವದೆಹಲಿ: ಅಮೆರಿಕದ ಸಿನ್ಸಿನಾಟಿಯಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದು, ಕೇವಲ ಒಂದು ವಾರದಲ್ಲಿ ನಡೆದ ಮೂರನೇ ಘಟನೆಯಾಗಿದೆ. ಸಾವಿಗೆ ನಿರ್ದಿಷ್ಟ ಕಾರಣ ಇನ್ನೂ ಪತ್ತೆಯಾಗಿಲ್ಲ.

ಜನವರಿಯಲ್ಲಿ ಅಮೆರಿಕದಲ್ಲಿ ಎಂಬಿಎ ಮುಗಿಸಿದ್ದ ವಿವೇಕ್ ಸೈನಿ ಎಂಬ 25 ವರ್ಷದ ವಿದ್ಯಾರ್ಥಿ ಮಾರಣಾಂತಿಕ ದಾಳಿಗೆ ಬಲಿಯಾಗಿದ್ದ. ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ದಾಖಲಾದ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಕೂಡ ಕಳೆದ ವಾರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನೀಲ್ ಆಚಾರ್ಯ ಎಂಬ ಭಾರತೀಯ ವಿದ್ಯಾರ್ಥಿ ಭಾನುವಾರ ನಾಪತ್ತೆಯಾಗಿದ್ದರು. ಜನವರಿ 30 ರಂದು ಅವರು ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾನಿಲಯವು ದೃಢಪಡಿಸಿತು. ಅವರು US ರಾಜ್ಯದ ಇಂಡಿಯಾನಾದಲ್ಲಿರುವ ಪ್ರತಿಷ್ಠಿತ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಅವರ ಸಾವಿಗೆ ನಿಖರ ಕಾರಣವೂ ತಿಳಿದುಬಂದಿಲ್ಲ.

ಇನ್ನೊಬ್ಬ ಭಾರತೀಯ ವಿದ್ಯಾರ್ಥಿ 25 ವರ್ಷದ ವಿವೇಕ್ ಸೈನಿ ಅವರ ಭೀಕರ ಹತ್ಯೆಯ ನಂತರ ಆಚಾರ್ಯ ನಿಧನರಾದರು. ಸೈನಿ ಇತ್ತೀಚೆಗೆ ಯುಎಸ್‌ನಲ್ಲಿ ಎಂಬಿಎ ಪದವಿಯನ್ನು ಗಳಿಸಿದ್ದರು. ಜಾರ್ಜಿಯಾ ರಾಜ್ಯದ ಲಿಥೋನಿಯಾ ನಗರದಲ್ಲಿ ಮನೆಯಿಲ್ಲದ ಮಾದಕ ವ್ಯಸನಿ ಆತನನ್ನು ಹೊಡೆದು ಕೊಲೆ ಮಾಡಿದ್ದಾನೆ. ವಿವೇಕ್ ಸೈನಿಯ ತಲೆಗೆ ಸುತ್ತಿಗೆಯಿಂದ ಸುಮಾರು 50 ಬಾರಿ ನಿರ್ದಯವಾಗಿ ದಾಳಿಕೋರ ಜೂಲಿಯನ್ ಫಾಕ್ನರ್ ಹೊಡೆದ ಭಯಾನಕ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read