ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್ : ಮನೆ ಬಾಗಿಲಿಗೆ ಬರಲಿದ್ದಾರೆ `ಪಶು ಸಖಿಯರು’!

ಬೆಂಗಳೂರು : ರೈತ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ, ಪ್ರಥಮ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಪಶು ಸಖಿಯರು ಮನೆ ಬಾಗಿಲಿಗೆ ಬರಲಿದ್ದಾರೆ.

ಹೌದು, ಪಶು ಸಂಗೋಪನಾ ಇಲಾಖೆಯು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಗ್ರಾಮಪಂಚಾಯತಿಗೆ ಒಬ್ಬರಂತೆ ಒಟ್ಟು 5,962 ಪಶುಸಖಿಯರನ್ನು 3,800 ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ.

ಪಶು ಸಖಿಯರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಗ್ರಾಮದಲ್ಲಿ ಜಾನುವಾರುಗಳಿಗೆ ರೋಗಗಳು ಕಂಡುಬಂದರೆ ತಕ್ಷಣ ಅದನ್ನು ಇಲಾಖೆಗೆ ತಿಳಿಸಲಿದ್ದಾರೆ. ಇವರು ಜಾನುವಾರುಗಳಿಗೆ ಲಸಿಕೆ, ಪ್ರಥಮ ಚಿಕಿತ್ಸೆ, ಮೇವು ಕಟಾವು ಯಂತ್ರ, ರೈತರಿಗೆ ನೆಲಹಾಸು ಹಾಗೂ ಮೇವಿನ  ಬೀಜ ಯಾವ ದಿನ ಯಾವ ಊರಿಗೆ ಬರಲಿದೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read