HomeKarnatakaBIG NEWS: ಪಟಾಕಿ ಮಳಿಗೆಗಳಿಗೆ ಗುಡ್ ನ್ಯೂಸ್; ಆನೇಕಲ್ ನಲ್ಲಿ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಅನುಮತಿ

BIG NEWS: ಪಟಾಕಿ ಮಳಿಗೆಗಳಿಗೆ ಗುಡ್ ನ್ಯೂಸ್; ಆನೇಕಲ್ ನಲ್ಲಿ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಅನುಮತಿ

ಬೆಂಗಳೂರು: ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪಟಾಕಿ ಮಳಿಗೆಗಳಿಗೆ ಪಾಟಾಕಿ ಮಾರಾಟಕ್ಕೆ ಅನುಮತಿ ನೀಡಿ ಹೈಕೋರ್ಟ್ ಆದೇಶ ನೀಡಿದೆ.

ಆನೇಕಲ್ ನಲ್ಲಿ ನಡೆದಿದ್ದ ಪಟಾಕಿ ಗೋದಾಮು ಬೆಂಕಿ ದುರಂತದಲ್ಲಿ 14 ಜನರು ಸಜೀವ ದಹನ ಪ್ರಕರಣದ ಬೆನ್ನಲ್ಲೇ ತಾಲೂಕಿನಲ್ಲಿದ್ದ ಪಟಾಕಿ ಮಳಿಗೆಗಳಿಗೆ ಬೀಗ ಜಡಿಯಲಾಗಿತ್ತು. ದೀಪಾವಳಿ ಹಬ್ಬದ ಹೊತ್ತಲ್ಲೇ ಪಟಾಕಿ ಮಳಿಗೆಗಳಿಗೆ ಅನುಮತಿ ನಿರಾಕರಿಸಿದಕ್ಕೆ ಪಟಾಕಿ ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದರು. ಅಲ್ಲದೇ ಹಲವರು ಹೈಕೋರ್ಟ್ ಮೊರೆ ಹೋಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆನೇಕಲ್ ತಾಲೂಕಿನ ಒಟ್ಟು 30 ಪಟಾಕಿ ಮಳಿಗೆಗಳಿಗೆ ನವೆಂಬರ್ 17ರವರೆಗೆ ಪಟಾಕಿ ಮಾರಲು ಅನುಮತಿ ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular