ಭಾರತದ ಮೂಲೆ ಮೂಲೆಗಳಲ್ಲೂ ಅಭಿಮಾನಿ ಬಳಗ ಹೊಂದಿರುವ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಬ್ಯಾಟಿಂಗ್ ಮಾಡಲು ಬಂದರೆ ಸಾಕು ಅವರ ಅಭಿಮಾನಿಗಳ ಕೂಗು ಸಹ ದೊಡ್ಡ ದಾಖಲೆಯಾಗಿರುತ್ತದೆ. ಐಪಿಎಲ್ ನಡೆಯುವ ಯಾವುದೇ ಕ್ರೀಡಾಂಗಣವಾದರೂ ಅಲ್ಲಿ ಧೋನಿ ಅಭಿಮಾನಿಗಳ ಅಬ್ಬರವೇ ಇರುತ್ತದೆ.
ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಕೆಆರ್ ಎದುರು 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದ್ದು, ಈ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಎಂ ಎಸ್ ಧೋನಿ ಬ್ಯಾಟಿಂಗ್ ಮಾಡಿದ್ದಾರೆ. ಎಂ ಎಸ್ ಧೋನಿ ಮೈದಾನಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಅವರ ಅಭಿಮಾನಿಗಳ ಕೂಗನ್ನು ಕೇಳಿ ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ಆಂಡ್ರೆ ರಸೆಲ್ ನಿಬ್ಬೆರಗಾಗಿದ್ದಾರೆ. ಧೋನಿ ಬರುವ ಸಮಯದಲ್ಲಿ ಆಂಡ್ರೆ ರಸೆಲ್ ಕಿವಿ ಮುಚ್ಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
https://twitter.com/FlyingSlip_/status/1777406198616293514?ref_src=twsrc%5Etfw%7Ctwcamp%5Etweetembed%7Ctwterm%5E1777406198616293514%7Ctwgr%5E408180d3eb9b98f827d4ee9350e22f96f78329cb%7Ctwcon%5Es1_&ref_url=https%3A%2F%2Fwww.hindustantimes.com%2Fcricket%2Fandre-russell-cant-bear-loud-cheer-for-ms-dhoni-in-chennai-covers-his-ears-with-hands-during-csk-vs-kkr-ipl-match-101712636437768.html