ವಿಶಾಖಪಟ್ಟಣಂ: ಮೂರು ವರ್ಷದ ಮಗುವಿನ ಮೇಲೆ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯವೆಸಗಿರುವ ಪೈಶಾಚಿಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಡಗಂಟ್ಯಾಡ ಮಂಡಲದಲ್ಲಿ ಈ ಕೃತ್ಯ ನಡೆದಿದೆ. ಬಾಲಕಿಯ ತಂದೆಯ ಭೇಟಿಗೆಂದು ಬಂದ ಸ್ನೇಹಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ದುರುಳ ಬಂದಿದ್ದ ವೇಳೆ ಮಗುವಿನ ತಂದೆ ಮನೆಯಲ್ಲಿರಲಿಲ್ಲ. ಮಗುವಿನ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು.
ಮಗುವನ್ನು ಬಿಸ್ಕೆಟ್ ಕೊಡುತ್ತೇನೆ ಎಂದು ಸಮೀಪದ ದಿನಸ್ ಅಂಗಡಿಗೆ ಕರೆದೊಯ್ದ ದುರುಳ ಮಾರ್ಗ ಮಧ್ಯೆಯೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಏನೂ ನಡೆದಿಲ್ಲ ಎಂಬಂತೆ ಮಗುವನ್ನು ಮನೆಗೆ ಕರೆತಂದು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಮಗು ನಿರಂತರವಾಗಿ ಅಳುತ್ತಿತ್ತು. ಕಂಗಾಲಾದ ತಾಯಿ ಮಗುವನ್ನು ಪರಿಶೀಲಿಸಿದಾಗ ರಕ್ತದ ಕಲೆಗಳು ಕಂಡುಬಂದಿವೆ.
ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಕೇಸ್ ದಾಖಲಾಗಿದೆ. ಈ ಘಟನೆಯನ್ನು ಆಂಧ್ರಪ್ರದೇಶದ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ. ಅಲ್ಲದೇ ಆರೋಪಿಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದೆ.

