ಅತ್ಯಂತ ವೇಗವಾಗಿ ಸಂಖ್ಯೆಗಳನ್ನು ಟೈಪ್ ಮಾಡುವ ಮೂಲಕ ‘ಗಿನ್ನೆಸ್’ ದಾಖಲೆ….!

ಆಂಧ್ರಪ್ರದೇಶದ ನಿವಾಸಿಯೊಬ್ಬರು ಅತ್ಯಂತ ಕಡಿಮೆ ಸಮಯದಲ್ಲಿ 1 ರಿಂದ 50 ಅಂಕಿಗಳನ್ನು ಟೈಪ್ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದಾರೆ.

ಮೇಜಾರಿ ಮಲ್ಲಿಕಾರ್ಜುನ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪುಂಗನೂರು ಮೂಲದ ಮಲ್ಲಿಕಾರ್ಜುನ ಅವರು 13.16 ಸೆಕೆಂಡುಗಳಲ್ಲಿ ಈ ಸಾಧನೆ ಮಾಡಿದರು.

ಜೂನ್ 11ರಂದು ಈ ಸಾಧನೆ ನಡೆದಿದ್ದು, ಗಿನ್ನಿಸ್ ದಾಖಲೆಯ ಪ್ರಕಾರ ಮಲ್ಲಿಕಾರ್ಜುನ ಅವರು ತಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಈ ಸವಾಲನ್ನು ಸ್ವೀಕರಿಸಿದ್ದಾರೆ.

ಮಲ್ಲಿಕಾರ್ಜುನ ಅವರ ದಾಖಲೆಯ ವಿಡಿಯೋ ತುಣುಕನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಕಾಮೆಂಟ್‌ಗಳ ವಿಭಾಗದಲ್ಲಿ ಹಲವಾರು ವ್ಯಕ್ತಿಗಳು ತಾವು ಮಲ್ಲಿಕಾರ್ಜುನಗಿಂತ ವೇಗವಾಗಿ ಟೈಪ್ ಮಾಡಬಹುದು ಎಂದು ಪ್ರತಿಪಾದಿಸಿದ್ದಾರೆ.

https://twitter.com/GWR/status/1674049539916054529?ref_src=twsrc%5Etfw%7Ctwcamp%5Etweetembed%7Ctwterm%5E1674049539

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read