HomeIndiaಮಗಳ ಇಷ್ಟದಂತೆ ಪ್ರೇಮ ವಿವಾಹ ಮಾಡಿ ಸರಳತೆ ಮೆರೆದ ಶಾಸಕ

ಮಗಳ ಇಷ್ಟದಂತೆ ಪ್ರೇಮ ವಿವಾಹ ಮಾಡಿ ಸರಳತೆ ಮೆರೆದ ಶಾಸಕ

ಅಮರಾವತಿ: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ನ ಶಾಸಕರೊಬ್ಬರು ತಮ್ಮ ಮಗಳ ಇಷ್ಟದಂತೆ ಪ್ರೇಮ ವಿವಾಹ ಮಾಡಿದ್ದಾರೆ.

ಆರ್. ಶಿವಪ್ರಸಾದ್ ರೆಡ್ಡಿ ಅವರ ಮಗಳು ಪಲ್ಲವಿ, ತನ್ನ ಸಹಪಾಠಿ ಪವನ್ ಅವರನ್ನು ವೈಎಸ್‌ಆರ್ ಜಿಲ್ಲೆಯ ಪ್ರೊಡುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದಾಗ ಖುದ್ದು ಹಾಜರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೂ ಮುನ್ನ ಎರಡೂ ಕಡೆಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜಾತಿ, ಹಣ, ಅಂತಸ್ತು ಲೆಕ್ಕಿಸದೆ ತನ್ನ ಸಹಪಾಠಿಯನ್ನು ಮದುವೆಯಾದ ಮಗಳನ್ನು ಆಶೀರ್ವದಿಸಿದ್ದೇನೆ ಎಂದು ಪ್ರೊಡುತ್ತೂರಿನ ಶಾಸಕ ಡಾ. ಮಗಳ ಇಚ್ಛೆಯಂತೆ ಮದುವೆಗೆ ವ್ಯವಸ್ಥೆ ಮಾಡಿದ್ದೇನೆ ಎಂದರು.

ಪಲ್ಲವಿ ಮತ್ತು ಪವನ್ ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ನಿರ್ಧರಿಸಿದ್ದು, ಅವರ ಪ್ರೀತಿಗೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular