HomeEntertainment'ಅನರ್ಥ' ಚಿತ್ರದ ಟ್ರೈಲರ್ ರಿಲೀಸ್

‘ಅನರ್ಥ’ ಚಿತ್ರದ ಟ್ರೈಲರ್ ರಿಲೀಸ್

ರಮೇಶ್ ಕೃಷ್ಣ ನಿರ್ದೇಶನದ ವಿಶಾಲ್ ಮಣ್ಣೂರ್ ಅಭಿನಯದ ‘ಅನರ್ಥ’ ಚಿತ್ರದ ಟೈಲರನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರಲ್ಲಿ ಕುತೂಹಲ ಮೂಡಿಸಿದೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿಶಾಲ್ ಮಣ್ಣೂರ್ ಮತ್ತು ವಿಹಾನಿ ಪ್ರಮುಖ ಪಾತ್ರದಲ್ಲಿದ್ದು, ಪ್ರಸನ್ನ ಬಾಗಿನ, ರಕ್ಷಿತ್, ಸಿ ವಿಜಯ್  ಕುಮಾರ್ ಮತ್ತು  ಗಣೇಶ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ತೇಜಸ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಎನ್ ಸಿ ಶ್ರೀಧರ್ ಮತ್ತು ಅಂಜಲ ನಿರ್ಮಾಣ ಮಾಡಿದ್ದು, ನಿಶಿತ್ ಪೂಜಾರಿ ಮತ್ತು ವಿನಯ್ ಸಂಕಲನ, ಕುಮಾರ್ ಗೌಡ ನಾಗಾವರ ಅವರ ಛಾಯಾಗ್ರಹಣವಿದೆ. ವಿ ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular