BIG NEWS : ಪೋಷಕರೇ ಹುಷಾರ್ : ಬೆಳಗಾವಿಯಲ್ಲಿ ಹಾಡಹಗಲೇ 9 ವರ್ಷದ ಬಾಲಕಿಯ ಅಪಹರಣಕ್ಕೆ ಯತ್ನ

ಬೆಳಗಾವಿ : ಟ್ಯೂಷನ್ ಗೆ ಹೊರಟ್ಟಿದ್ದ 9 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಣ ಮಾಡಲು ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

9 ವರ್ಷದ ಬಾಲಕಿ ಎಂದಿನಂತೆ ಮನೆಯಿಂದ ಟ್ಯೂಷನ್ ಗೆ ಹೊರಟ್ಟಿದ್ದಳು. ಈ ವೇಳೆ ಬೆಳಗಾವಿಯ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ಬಂದ ಓರ್ವ ದುಷ್ಕರ್ಮಿ ಬಾಲಕಿಗೆ ಚಾಕ್ ಲೇಟ್ ಕೊಡುವ ನೆಪದಲ್ಲಿ ಹೋಗಿ ಬಾಲಕಿಯನ್ನು ಹೆಗಲ ಮೇಲೆ ಹಾಕಿಕೊಳ್ಳುತ್ತಾನೆ.

ಇದರಿಂದ ಜೋರಾಗಿ ಬಾಲಕಿ ಕಿರುಚಲು ಆರಂಭಿಸಿದ್ದು, ಜನರು ಓಡಿಬರುತ್ತಾರೆ. ಆದರೂ ಪ್ರಯತ್ನ ಬಿಡದ ದುಷ್ಕರ್ಮಿ ಬಾಲಕಿಯನ್ನು ಎತ್ತಿಕೊಂಡು ಓಡಲು ಶುರು ಮಾಡುತ್ತಾರೆ. ಜನರು ಅಪಹರಣಕಾರರನ್ನು ಬೆನ್ನಟ್ಟಿದ್ದು, ನಂತರ ದುಷ್ಕರ್ಮಿ ಬಾಲಕಿಯನ್ನು ಕೆಳಗಿಳಿಸಿ ಜನರಿಂದ ತಪ್ಪಿಸಿಕೊಳ್ಳಲು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಗ್ಗೆ ಬಾಲಕಿಯ ಪೋಷಕರು ದೂರು ನೀಡಿದ್ದು, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read