HomeTourismಆಲಮಟ್ಟಿ ಪ್ರವಾಸಕ್ಕೆ ಮತ್ತೊಂದು ಆಕರ್ಷಣೆ: ಅಮ್ಯೂಸ್‌ಮೆಂಟ್ ಪಾರ್ಕ್ ಲೋಕಾರ್ಪಣೆ

ಆಲಮಟ್ಟಿ ಪ್ರವಾಸಕ್ಕೆ ಮತ್ತೊಂದು ಆಕರ್ಷಣೆ: ಅಮ್ಯೂಸ್‌ಮೆಂಟ್ ಪಾರ್ಕ್ ಲೋಕಾರ್ಪಣೆ

ಆಲಮಟ್ಟಿ ಡ್ಯಾಂಗೆ ಪ್ರವಾಸ ಹೋಗುವ ಜನರಿಗೆ ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಿದೆ. ಬಸನಾಡಿನ ಹೆಮ್ಮೆಯ ತಾಣವಾದ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಸಮೀಪ ಅಮ್ಯೂಸ್‌ಮೆಂಟ್ ಪಾರ್ಕ್ ಲೋಕಾರ್ಪಣೆ ಮಾಡಲಾಗಿದೆ.

ಆಲಮಟ್ಟಿ ಡ್ಯಾಂ ಸಮೀಕ ಅಂದಾಜು 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಜಲ ವಿನೋದ ಉದ್ಯಾನವನ್ನು ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ ಉದ್ಘಾಟಿಸಿದರು.

ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ವಿವಿಧ ಜಲಕ್ರೀಡೆಗಳು, ಮಕ್ಕಳಿಗೆ ವಿಶೇಷ ಆಟೋಪಕರಣಗಳು ಹಾಗೂ ಕುಟುಂಬ ಸಮೇತ ವಿಶ್ರಾಂತಿಗೆ ಅನುಕೂಲವಾದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನರಂಜನೆ ಕೇಂದ್ರವಷ್ಟೇ ಅಲ್ಲ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಜಿಲ್ಲೆಯ ಆರ್ಥಿಕತೆಗೆ ಚೈತನ್ಯ ತುಂಬುವ ಯೋಜನೆ ಇದಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಕ ಸೌಲಭ್ಯಗಳನ್ನು ಸೇರಿಸಿ, ಈ ತಾಣವನ್ನು ರಾಜ್ಯ ಮಟ್ಟದ ಅಮ್ಯೂಸ್ ಮೆಂಟ್ ಪಾರ್ಕ್ ಆಗಿ ಅಭಿವೃದ್ಧಿಪಡಿಸುವ ಸಂಕಲ್ಪ ಹೊಂದಿದ್ದೇವೆ ಎಂದು ಸಚಿವರು ಘೋಷಣೆ ಮಾಡಿದ್ದಾರೆ.

ಈ ಯೋಜನೆ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳು ಮಾತ್ರವಲ್ಲದೆ, ಸಂಪೂರ್ಣ ಉತ್ತರ ಕರ್ನಾಟಕವನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಇನ್ನಷ್ಟು ಪ್ರಭಾವಿಯಾಗಿ ಗುರುತಿಸುವ ಹೆಜ್ಜೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರ್ ಗಳಿಂದ 524 ಮೀಟರ್‌ಗೆ ಹೆಚ್ಚಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಈ ಕ್ರಮದಿಂದ ಸುಮಾರು 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆತು, ರೈತರ ಬದುಕಿನಲ್ಲಿ ಸಮೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಆಲಮಟ್ಟಿಯ ಜಲವಿನೋದ ಉದ್ಯಾನದಲ್ಲಿ ಬಣ್ಣ ಬಣ್ಣದ ಜಲಸ್ಲೈಡ್ ಗಳು, ಹರಿಯುವ ನೀರಿನ ಝರಿಗಳು, ಆಕರ್ಷಕ ವಿನ್ಯಾಸಗಳು ಎಲ್ಲವೂ ಸೇರಿ ಕುಟುಂಬ ಸಮೇತ ಸಂಭ್ರಮಿಸಲು ಅದ್ಭುತ ವಾತಾವರಣ ನಿರ್ಮಾಣ ಮಾಡಲಾಗಿದೆ.

ಬೇಸಿಗೆಗೆ ತಂಪಿನ ತಾಣವಾಗಿ, ಮನರಂಜನೆಗೆ ಹೊಸ ವಿಳಾಸವಾಗಿ ಆಲಮಟ್ಟಿ ವಾಟರ್ ಪಾರ್ಕ್ ಗಮನಸೆಳೆಯುತ್ತಿದೆ. ಬೇಸಿಗೆಯಲ್ಲಿ ಪ್ರವಾಸ ಬರುವವರಿಗೆ ಪಾರ್ಕ್ ಬಳಕೆಗೆ ಲಭ್ಯವಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular