HomeEntertainmentರೇಖಾ-ಜಯಾ ಕಥೆ ಬಿಡಿ; ಈ ನಟಿಗಾಗಿ ಒಂದು ಲಾರಿ ತುಂಬಾ ಹೂವು ಕಳಿಸಿದ್ರು ಬಿಗ್ ಬಿ...

ರೇಖಾ-ಜಯಾ ಕಥೆ ಬಿಡಿ; ಈ ನಟಿಗಾಗಿ ಒಂದು ಲಾರಿ ತುಂಬಾ ಹೂವು ಕಳಿಸಿದ್ರು ಬಿಗ್ ಬಿ ಏನಿದು ಹಳೆಯ ರಹಸ್ಯ?

ಮುಂಬೈ: ಬಾಲಿವುಡ್ ಶೆಹೆನ್ಶಾ ಅಮಿತಾಭ್ ಬಚ್ಚನ್ ಅಂದ್ರೆ ಸಿನಿಮಾ ರಂಗದಲ್ಲಿ ಎಲ್ಲಿಲ್ಲದ ಗೌರವ. ಅವರ ಜೊತೆ ನಟಿಸಬೇಕು ಎಂಬುದು ಹಲವು ನಟಿಯರ ಕನಸಾಗಿರುತ್ತದೆ. ಆದರೆ ಇಲ್ಲೊಬ್ಬ ಸ್ಟಾರ್ ನಟಿ ಮಾತ್ರ ಅಮಿತಾಭ್ ಬಚ್ಚನ್ ಜೊತೆ ನಟಿಸಲು ಸುತಾರಾಂ ಒಪ್ಪಿರಲಿಲ್ಲ. ಅಚ್ಚರಿಯೆಂದರೆ, ಆ ನಟಿಯನ್ನು ಸಿನೆಮಾಗೆ ಒಪ್ಪಿಸಲು ಬಿಗ್ ಬಿ ಸಾಕ್ಷಾತ್ ಒಂದು ಟ್ರಕ್ ತುಂಬಾ ಗುಲಾಬಿ ಹೂವುಗಳನ್ನು ಕಳುಹಿಸಿಕೊಟ್ಟಿದ್ದರು. ಅಮಿತಾಭ್ ಅವರ ಈ ರೋಮ್ಯಾಂಟಿಕ್ ಸಾಹಸಕ್ಕೆ ಮನಸೋತ ಆ ನಟಿ ಬೇರಾರೂ ಅಲ್ಲ, ಅತಿಲೋಕ ಸುಂದರಿ ಶ್ರೀದೇವಿ.

ಈ ಕುತೂಹಲಕಾರಿ ಪ್ರಸಂಗ ನಡೆದಿದ್ದು 1992ರ ಸೂಪರ್ ಹಿಟ್ ಸಿನಿಮಾ ‘ಖುದಾ ಗವಾ’ ಚಿತ್ರೀಕರಣದ ವೇಳೆ. ಅಂದು ನಿರ್ದೇಶಕ ಮುಕುಲ್ ಆನಂದ್ ಈ ಚಿತ್ರದ ಕಥೆ ಸಿದ್ಧಪಡಿಸಿ ಅಮಿತಾಭ್ ಬಳಿ ಹೋದಾಗ, ಶ್ರೀದೇವಿಯೇ ನಾಯಕಿಯಾಗಬೇಕೆಂದು ಇಬ್ಬರೂ ಬಯಸಿದ್ದರು. ಆದರೆ ಶ್ರೀದೇವಿ ಮಾತ್ರ ಬಿಗ್ ಬಿ ಜೊತೆ ನಟಿಸಲು ನಿರಾಸಕ್ತಿ ತೋರಿದ್ದರು. ಇದಕ್ಕಾಗಿ ಅಮಿತಾಭ್ ಒಂದು ಉಪಾಯ ಹೂಡಿದರು. ಶ್ರೀದೇವಿ ಶೂಟಿಂಗ್ ಮಾಡುತ್ತಿದ್ದ ಜಾಗಕ್ಕೆ ಬರೋಬ್ಬರಿ ಒಂದು ಟ್ರಕ್ ತುಂಬಾ ತಾಜಾ ಗುಲಾಬಿ ಹೂವುಗಳನ್ನು ಕಳುಹಿಸಿಕೊಟ್ಟರು.

ಅಮಿತಾಭ್ ಅವರ ಈ ಅನಿರೀಕ್ಷಿತ ಉಡುಗೊರೆಯನ್ನು ನೋಡಿ ಶ್ರೀದೇವಿ ದಂಗಾಗಿ ಹೋಗಿದ್ದರು. ಬಿಗ್ ಬಿ ನೀಡಿದ ಈ ದೊಡ್ಡ ಮಟ್ಟದ ಗೌರವಕ್ಕೆ ಮಾರುಹೋದ ಶ್ರೀದೇವಿ ಕೊನೆಗೂ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದರು. ಆದರೆ ಈ ಚಿತ್ರಕ್ಕೆ ಸಹಿ ಮಾಡುವ ಮುನ್ನ ಶ್ರೀದೇವಿ ಒಂದು ಕಠಿಣ ಷರತ್ತನ್ನು ವಿಧಿಸಿದ್ದರು. ಆ ಸಿನಿಮಾದಲ್ಲಿ ತಾನು ತಾಯಿ ಮತ್ತು ಮಗಳು ಹೀಗೆ ಎರಡೂ ಪಾತ್ರಗಳಲ್ಲಿ ನಟಿಸಬೇಕು ಹಾಗೂ ಅಮಿತಾಭ್ ಬಚ್ಚನ್ ಅವರಿಗೆ ಸಮಾನವಾದ ಸ್ಕ್ರೀನ್ ಟೈಮ್ ತನಗೆ ಇರಬೇಕು ಎಂಬುದು ಅವರ ಡಿಮ್ಯಾಂಡ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರೀದೇವಿಯ ಈ ಷರತ್ತನ್ನು ನಿರ್ಮಾಪಕರು ಮತ್ತು ಅಮಿತಾಭ್ ಒಪ್ಪಿಕೊಂಡರು. ಹೀಗೆ ‘ಖುದಾ ಗವಾ’ ಸಿನಿಮಾದಲ್ಲಿ ಶ್ರೀದೇವಿ ದ್ವಿಪಾತ್ರದಲ್ಲಿ ಮಿಂಚಿದರು. ದಕ್ಷಿಣದ ಸ್ಟಾರ್ ನಟ ನಾಗಾರ್ಜುನ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅಮಿತಾಭ್ ಬಚ್ಚನ್ ಅವರ ಪ್ರೇಮ ಜೀವನದ ಬಗ್ಗೆ ಕೇಳಿದಾಗಲೆಲ್ಲಾ ರೇಖಾ ಅಥವಾ ಜಯಾ ಬಚ್ಚನ್ ಹೆಸರು ಮುನ್ನೆಲೆಗೆ ಬರುತ್ತದೆ. ಆದರೆ ಶ್ರೀದೇವಿಯವರನ್ನು ಸಿನಿಮಾಗೆ ಒಪ್ಪಿಸಲು ಅವರು ನಡೆಸಿದ ಈ ‘ಗುಲಾಬಿ ಹೂವಿನ ಟ್ರಕ್’ ಸಾಹಸ ಇಂದಿಗೂ ಬಿ-ಟೌನ್‌ನಲ್ಲಿ ಅಚ್ಚರಿಯ ಸಂಗತಿಯಾಗಿಯೇ ಉಳಿದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular