ಮದುವೆ ಮಂಟಪಕ್ಕೆ ಬರುವ ಮುನ್ನ ಮಾಲೆ ಹಾಕುವ ಸಮಾರಂಭದಲ್ಲಿ ವರನ ಸ್ನೇಹಿತರು ತಮಾಷೆ ಮತ್ತು ನಗುವಿನ ಕಚಗುಳಿಯನ್ನು ಹುಟ್ಟಿಸಿದ್ದಾರೆ. ಈ ರೀತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ.
ವೈರಲ್ ವಿಡಿಯೋದಲ್ಲಿ, ಮಾಲೆ ಹಾಕುವ ಸಮಾರಂಭದಲ್ಲಿ ವರನ ಸ್ನೇಹಿತರು ಅವನ ಕಾಲೆಳೆಯಲು ಪ್ರಾರಂಭಿಸುತ್ತಾರೆ. ವಧು ಮತ್ತು ವರ ವೇದಿಕೆಯ ಮೇಲೆ ನಿಂತು ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿರುವಾಗ, ಹಿಂಭಾಗದಲ್ಲಿ ನಿಂತಿರುವ ಸ್ನೇಹಿತರು ವರನನ್ನು ಕರೆಯಲು ಪ್ರಾರಂಭಿಸುತ್ತಾರೆ. ಸ್ನೇಹಿತನೊಬ್ಬ, ‘ಸುಮಿತ್ ನೀನು ಇಲ್ಲಿ ಏನು ಮಾಡುತ್ತಿದ್ದೀಯಾ, ಅಮ್ಮ ಕರೀತಿದ್ದಾರೆ’ ಎಂದು ಹೇಳುತ್ತಾನೆ. ಸ್ನೇಹಿತರು ಇಲ್ಲಿಗೆ ನಿಲ್ಲಿಸಲಿಲ್ಲ, ನಂತರ ಹಿಂಬದಿಯಿಂದ ‘ಈ ಹುಡುಗಿ ಯಾರು?’ ಎಂಬ ಧ್ವನಿ ಕೇಳಿಬರುತ್ತದೆ. ಈ ಸಮಯದಲ್ಲಿ, ಫೋಟೋಗಳಿಗೆ ಪೋಸ್ ನೀಡುತ್ತಿರುವ ವಧು ಮತ್ತು ವರರಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಆದರೆ, ಸ್ನೇಹಿತರು ಅದೇ ಪದಗಳನ್ನು ಮತ್ತೆ ಹೇಳಿದಾಗ, ವಧುವಿಗೆ ತನ್ನ ನಗುವನ್ನು ನಿಯಂತ್ರಿಸಲು ಸಾಧ್ಯವಾಗದೆ ‘ಈ ಹುಡುಗಿ ಯಾರು?’ ಎಂದು ಕೇಳಿದ ತಕ್ಷಣ ನಗಲು ಪ್ರಾರಂಭಿಸುತ್ತಾಳೆ.
ವರಮಾಲೆ ಸಮಾರಂಭದಲ್ಲಿ ವಧು ಮತ್ತು ವರನ ಕಾಲೆಳೆಯುವ ಸ್ನೇಹಿತರ ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 4 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಸುಮಾರು 24 ಲಕ್ಷ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ ಮತ್ತು ಒಂದು ಕೋಟಿ ಬಳಕೆದಾರರೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಜನರ ಸಾಕಷ್ಟು ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ವೈರಲ್ ವಿಡಿಯೋಗೆ ಸುಮಾರು 10.4 ಸಾವಿರ ಕಾಮೆಂಟ್‌ಗಳು ಬಂದಿವೆ.