ನ್ಯೂಯಾರ್ಕ್: ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಡುತ್ತಿದ್ದ 28 ವರ್ಷದ ಯುವಕನನ್ನು ಕೊಲೆಗೈಯ್ಯಲಾಗಿದೆ.
ತೆಲಂಗಾಣ ಮೂಲದ ಅನ್ಮುಲ್ ಕುಂಚಾ ಹತ್ಯೆಯಾದ ಯುವಕ. ಅನ್ಮುಲ್ ಕುಂಚಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವಾರಾಂತ್ಯದಲ್ಲಿ ಪಿಜ್ಜಾ ಡಿಲಿವರಿ ಎಕ್ಸಿಕುಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪಿಜ್ಜಾ ನೀಡಿ ವಾಪಾಸ್ ಆಗುತ್ತಿದ್ದಾಗ ಫಿಲಡೆಲ್ಫಿಯಾದಲ್ಲಿ ಅನ್ಮುಲ್ ಕುಂಚಾ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿಗೆ ಸ್ಥಳದಲ್ಲೆ ಅನ್ಮುಲ್ ಮೃತಪಟ್ಟಿದ್ದಾರೆ. ಯಾಅವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

