ಶತಮಾನದ ಭೀಕರ ಪ್ರವಾಹ: ಶರವೇಗದಲ್ಲಿ ಮುಳುಗಿದ ನಗರ: 50 ಜನರು ಸಾವು: ಹಲವರು ಕಣ್ಮರೆ!

ಟೆಕ್ಸಾಸ್: ಜಗತ್ತಿನ ವಿವಿಧ ದೇಶಗಳಲ್ಲಿ ರಣ ಭೀಕರ ಮಳೆಯಿಂದಾಗಿ ಪ್ರವಾಹವುಂಟಾಗುತ್ತಿದೆ. ಭಾರತ, ಅಮೆರಿಕ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರಿ ಮಳೆ ಹಲವು ರಾಜ್ಯಗಳನ್ನು ಅಲ್ಲೋಲಕಲ್ಲೋಲಗೊಳಿಸಿವೆ. ಈ ನಡುವೆ ಅಮೆರಿಕಾದ ಟೆಕ್ಸಾಸ್ ನಗರದಲ್ಲಿ ದಿಢೀರ್ ಪ್ರವಾಹದಿಂದಾಗಿ ನಗರಗಳೇ ಮುಳುಗಿ ಹೋಗಿವೆ.

ವರುಣಾರ್ಭಟಕ್ಕೆ ಶರವೇಗದಲ್ಲಿ ಅಪ್ಪಳಿಸಿದ ಭೀಕರ ಪ್ರವಾಹಕ್ಕೆ ಮನೆಗಳು, ಕ್ಯಾಂಪ್ ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಶತಮಾನಗಳ ಹಿಂದಿನ ಪ್ರವಾಹದ ಅಬ್ಬರ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಪಾರ ಪ್ರಮಾಣದ ಸಾವು, ನೋವು, ಹಾನಿಯುಂಟಾಗಿದೆ.

ಟೆಕ್ಸಾಸ್ ನಲ್ಲಿ ಸಂಭವಿಸಿದ ಪ್ರವಾಹದಲ್ಲಿ 15 ಮಕ್ಕಳು ಸೇರಿದಂತೆ 50 ಜನರು ಸಾವನ್ನಪ್ಪಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ. ರಕ್ಷಣ ಅಕಾರ್ಯಾಚರಣೆ ಮುಂದುವರೆದಿದೆ.

ಅಮೆರಿಕಾದ ಕೆರ್ ಕೌಂಟಿಯಲ್ಲಿ 43, ಟ್ರವಿಸ್ ಕೌಂಟಿಯಲ್ಲಿ 4, ಬರ್ನೆಟ್ ಕೌಂಟಿಯಲ್ಲಿ ಇಬ್ಬರು, ಗ್ರೋನ್ ಕೌಂಟಿಯಲ್ಲಿ ಓರ್ವರು ಮೃತಪಟ್ಟಿದ್ದಾರೆ. ನದಿ ತೀರದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ. 27 ಮಕ್ಕಳು ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕ್ಯಾಂಪ್ ನಲ್ಲಿ ಒಟ್ಟು 750 ಬಾಲಕಿಯರು ಭಾಗವಹಿಸಿದ್ದರು.

ಪ್ರವಾಹದ ಹಿನ್ನೆಲೆಯಲ್ಲಿ ನೂನಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read