HomeInternationalBIG NEWS: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ

BIG NEWS: ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ

ನ್ಯೂಯಾರ್ಕ್: ಅಮೆರಿಕಾದ ಜಾರ್ಜೆಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ವಿವೇಕ್ ಸೈನಿ (25) ಮೃತ ವಿದ್ಯಾರ್ಥಿ. ಹರ್ಯಾಣದ ಪಂಚಕುಲ ನಿವಾಸಿ. ವಿದ್ಯಾರ್ಥಿಯ ತಲೆಗೆ ದುಷ್ಕರ್ಮಿಗಳು ಸುತ್ತಿಗೆಯಿಂದ ಹೊಡೆದು 50 ಬಾರಿ ಹೊಡೆದು ಹತ್ಯೆ ಮಾಡಿದ್ದಾರೆ.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿ ಕೊಂದ ಆರೋಪಿಯನ್ನು ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದೆ. ಆರೋಪಿ ಮಾದಕವಸ್ತುಗಳ ವ್ಯಸನಿಯಾಗಿದ್ದ. ಮೃತ ವಿದ್ಯಾರ್ಥಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ಆರೋಪಿಯ ಪರಿಚಯವಿತ್ತು, ಆರೋಪಿ ಕೆಲ ದಿನಗಳಿಂದ ಉಚಿತವಗಿ ಆಹಾರ ಪಡೆದು ಹೋಗುತ್ತಿದ್ದ. ಜನವರಿ 14ರಂದು ಮತ್ತೆ ಅಂಗಡಿಗೆ ಬಂದಿದ್ದ ಆರೋಪಿ ಉಚಿತವಾಹಿ ವಸ್ತುಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ವಿದ್ಯಾರ್ಥಿ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ವಿದ್ಯಾರ್ಥಿಯನ್ನು ಹತ್ಯೆ ಮಡಲು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular