HomeInternationalಮತ್ತೆ ತೀವ್ರಗೊಂಡ ಅಮೆರಿಕ-ಇರಾನ್‌ ಯುದ್ಧ

ಮತ್ತೆ ತೀವ್ರಗೊಂಡ ಅಮೆರಿಕ-ಇರಾನ್‌ ಯುದ್ಧ

ಟೆಹ್ರಾನ್‌- ಪರ್ಷಿಯನ್‌ ಕೊಲ್ಲಿ ಹಾಗೂ ಓಮನ್‌ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್‌ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕಳೆದ ಎರಡು ದಿನಗಳಲ್ಲಿ ಅಮೆರಿಕದ ಯುದ್ಧನೌಕೆಯ ಮೇಲೆ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್‌್ಸ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಿಂದ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಪಡೆಗಳು ಪ್ರತೀಕಾರ ತೀರಿಸಿಕೊಂಡಿದ್ದು, ಖಾರ್ಗ್‌ ದ್ವೀಪ ಹಾಗೂ ಓಮನ್‌ ಕೊಲ್ಲಿಯ ಬಳಿ ಇರಾನ್‌ನ ಐದು ಬೃಹತ್‌ ಕಚ್ಚಾ ತೈಲ ಟ್ಯಾಂಕರ್‌ಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಓಮನ್‌ ಕೊಲ್ಲಿಯಲ್ಲಿ ಇರಾನಿನ ಐದು ಹಡಗುಗಳನ್ನು ಅಮೆರಿಕ ಹೊಡೆದುರುಳಿಸಿದ್ದು, ಕಾರ್ಯಾಚರಣೆ ನಡೆಸುವ ಮುನ್ನ ಎಲ್ಲಾ ಐದು ಹಡಗುಗಳಲ್ಲಿದ್ದ ಸಿಬ್ಬಂದಿಗೆ ಸುರಕ್ಷಿತವಾಗಿ ಹೊರಬರಲು ನೇರ ಸೂಚನೆ ನೀಡಲಾಗಿತ್ತು ಎಂದು ಅಮೆರಿಕದ ಸೇನಾ ಕಮಾಂಡ್‌ ತಿಳಿಸಿದೆ.

ಈ ಟ್ಯಾಂಕರ್‌ಗಳನ್ನು ಇರಾನ್‌ನ ಐಆರ್‌ಜಿಸಿ ತನ್ನ ಪ್ರಾದೇಶಿಕ ಪ್ರಾಕ್ಸಿ ಸಶಸ್ತ್ರ ಗುಂಪುಗಳಿಗೆ ಹಣಕಾಸು ಒದಗಿಸುವ ಬಹುಕೋಟಿ ಡಾಲರ್‌ ಮೌಲ್ಯದ ಶಾಡೋ ತೈಲ ಜಾಲದ ಭಾಗವಾಗಿ ಬಳಸುತ್ತಿತ್ತು ಎಂದು ಅಮೆರಿಕ ಆರೋಪಿಸಿದೆ.

ಅಮೆರಿಕಾ ಮತ್ತು ಇರಾನ್ ಕಾರ್ಯಾಚರಣೆಗಳು

ಇರಾನ್‌ ಹಾರಿಸಿದ ಬ್ಯಾಲಿಸ್ಟಿಕ್‌ ಕ್ಷಿಪಣಿಗಳನ್ನು ಅಮೆರಿಕದ ರಕ್ಷಣಾ ಪಡೆಗಳು ಯಶಸ್ವಿಯಾಗಿ ತಡೆದಿದ್ದು, ಅಮೆರಿಕದ ಯುದ್ಧನೌಕೆಗಳಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಸಿಇಎನ್‌ಸಿಒಎಂ ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್‌ 5 ರಂದು ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್‌ ದಾಳಿಗೆ ಯತ್ನಿಸಿದಾಗ ಈಗಾಗಲೇ ಮೂರು ಟ್ಯಾಂಕರ್‌ಗಳನ್ನು ಹೊಡೆದುರುಳಿಸಲಾಗಿತ್ತು. ಇದರೊಂದಿಗೆ ಕೇವಲ ಮೂರು ದಿನಗಳಲ್ಲಿ ಇರಾನ್‌ನ ಒಟ್ಟು 8 ತೈಲ ಟ್ಯಾಂಕರ್‌ಗಳನ್ನು ಅಮೆರಿಕ ಧ್ವಂಸಗೊಳಿಸಿದಂತಾಗಿದೆ.

ಇರಾನ್‌ನ ಪ್ರತೀಕಾರ

ತನ್ನ ತೈಲ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್‌ ಯಾ ಹೈದರ್‌ ಕರ್ರಾರ್‌ ಎಂಬ ಹೆಸರಿನಲ್ಲಿ ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆ ಘೋಷಿಸಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕದ ಅಲ್‌‍-ಅಜ್ರಾಕ್‌ ವಾಯುನೆಲೆಯನ್ನು ಗುರಿಯಾಗಿಸಿ ಎಫ್‌‍-35, ಎಫ್‌‍-16 ಮತ್ತು ಎಫ್‌‍-15 ಫೈಟರ್‌ ಜೆಟ್‌ಗಳು ಇರುವ ಹ್ಯಾಂಗರ್‌ಗಳ ಮೇಲೆ ಘನ ಮತ್ತು ದ್ರವ ಇಂಧನ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಿರುವುದಾಗಿ ಐಆರ್‌ಜಿಸಿ ಹೇಳಿಕೊಂಡಿದೆ.

ವಿಶ್ವದ ಶೇಕಡಾ 20ಕ್ಕೂ ಹೆಚ್ಚು ಕಚ್ಚಾ ತೈಲ ಸಾಗಣೆಯಾಗುವ ಹಾರ್ಮುಜ್‌ ಜಲಸಂಧಿ ಮತ್ತು ಖಾರ್ಗ್‌ ದ್ವೀಪದ ಸಮೀಪವೇ ಈ ಭೀಕರ ಕದನ ನಡೆಯುತ್ತಿರುವುದರಿಂದ ಜಾಗತಿಕ ಇಂಧನ ಪೂರೈಕೆ ವ್ಯತ್ಯಯಗೊಳ್ಳುವ ಮತ್ತು ಕಚ್ಚಾ ತೈಲ ದರಗಳು ತೀವ್ರವಾಗಿ ಏರಿಕೆಯಾಗುವ ಭೀತಿ ಎದುರಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular