HomeAutoಅಮೆಜಾನ್ ಪ್ರೈಮ್ ಡೇ ಸೇಲ್ ಜು.4ರಿಂದ ಶುರು: ಭರ್ಜರಿ ಆಫರ್‌ಗಳೊಂದಿಗೆ ಯೆಜ್ಡಿ ಸ್ಕ್ರಾಂಬ್ಲರ್ ಗೆ ಗ್ರ್ಯಾಂಡ್...

ಅಮೆಜಾನ್ ಪ್ರೈಮ್ ಡೇ ಸೇಲ್ ಜು.4ರಿಂದ ಶುರು: ಭರ್ಜರಿ ಆಫರ್‌ಗಳೊಂದಿಗೆ ಯೆಜ್ಡಿ ಸ್ಕ್ರಾಂಬ್ಲರ್ ಗೆ ಗ್ರ್ಯಾಂಡ್ ಎಂಟ್ರಿ

ಬೆಂಗಳೂರು: ಜಾವಾ ಮತ್ತು ಯೆಜ್ಡಿಯಂತಹ ಐಕಾನಿಕ್ ಮೋಟಾರ್‌ಸೈಕಲ್‌ಗಳ ಮೂಲಕ ಬೈಕ್ ಪ್ರೇಮಿಗಳ ಹೃದಯ ಗೆದ್ದಿರುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಸಂಸ್ಥೆ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಭಾರತದ ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ಹಬ್ಬವಾದ ಅಮೆಜಾನ್ ಪ್ರೈಮ್ ಡೇ 2026 ಸೇಲ್‌ನಲ್ಲಿ ಕಂಪನಿಯು ಭಾಗಿಯಾಗುತ್ತಿದ್ದು, ತನ್ನ ಅತ್ಯಂತ ಜನಪ್ರಿಯ ಹಾಗೂ ರಗಡ್ ಲುಕ್‌ನ ಯೆಜ್ಡಿ ಸ್ಕ್ರಾಂಬ್ಲರ್ (Yezdi Scrambler) ಬೈಕ್ ಅನ್ನು ಆನ್‌ಲೈನ್ ಮಾರಾಟಕ್ಕಿಟ್ಟಿದೆ. ಈ ಮೂಲಕ ಆನ್‌ಲೈನ್‌ನಲ್ಲೇ ಬೈಕ್ ಬುಕ್ ಮಾಡಲು ಕಾಯುತ್ತಿದ್ದ ಯುವಕರಿಗೆ ಮತ್ತು ಜಾವಾ ಅಭಿಮಾನಿಗಳಿಗೆ ಭರ್ಜರಿ ಆಫರ್ ಸಿಕ್ಕಂತಾಗಿದೆ.

ಜುಲೈ 4 ರಿಂದ 6 ರವರೆಗೆ ಮಾತ್ರ ಅವಕಾಶ

ಭಾರತದ ಅತಿ ಹಗುರವಾದ ಸ್ಕ್ರಾಂಬ್ಲರ್ ಬೈಕ್ ಎಂದೇ ಖ್ಯಾತಿ ಪಡೆದಿರುವ ಯೆಜ್ಡಿ ಸ್ಕ್ರಾಂಬ್ಲರ್, ಇದೇ ಜುಲೈ 4 ರಿಂದ 6, 2026 ರವರೆಗೆ ನಡೆಯುವ ಅಮೆಜಾನ್ ಪ್ರೈಮ್ ಡೇ’ ಸಂದರ್ಭದಲ್ಲಿ ಅಮೆಜಾನ್‌ನ ‘ನ್ಯೂ ಲಾಂಚ್ ಸ್ಟೋರ್ನಲ್ಲಿ ಲಭ್ಯವಿರಲಿದೆ. ಬೈಕ್ ಪ್ರಿಯರು ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕ ಆಕರ್ಷಕ ಆಫರ್‌ಗಳೊಂದಿಗೆ ಈ ಬೈಕ್ ಬುಕ್ ಮಾಡಬಹುದು.

ಯೆಜ್ಡಿ ಸ್ಕ್ರಾಂಬ್ಲರ್ ವಿಶೇಷತೆ ಏನು?

ನಗರದ ಟ್ರಾಫಿಕ್ ರಸ್ತೆಗಳು ಹಾಗೂ ವಾರಾಂತ್ಯದ ಆಫ್-ರೋಡ್ ಟ್ರಿಪ್‌ಗಳಿಗೆ ಬೇಕಾದಂತೆ ಯೆಜ್ಡಿ ಸ್ಕ್ರಾಂಬ್ಲರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಬೈಕ್ ಹೊಸ 350 ಸಿಸಿ ‘ಲಿಕ್ವಿಡ್-ಕೂಲ್ಡ್ ಕಟಾರ್ ಎಂಜಿನ್‌’ ಹೊಂದಿದ್ದು, ಹಗುರವಾದ ವಿನ್ಯಾಸದಿಂದಾಗಿ ಎಂತಹ ಕಠಿಣ ರಸ್ತೆಗಳಲ್ಲೂ ಸುಲಭವಾಗಿ ಮತ್ತು ವೇಗವಾಗಿ ರೈಡ್ ಮಾಡಬಹುದು. ಇದರ ಫ್ಯಾಕ್ಟರಿ-ಕಸ್ಟಮ್ ಲುಕ್, ಬೈಕ್ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯುವಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೈಕ್ ಬಿಡುಗಡೆ ಬಗ್ಗೆ ಮಾತನಾಡಿರುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್‌ನ ಸಹ-ಸ್ಥಾಪಕ ಅನುಪಮ್ ಥರೇಜಾ, ಭಾರತದಲ್ಲಿ ಸ್ಕ್ರಾಂಬ್ಲರ್ ಬೈಕ್‌ಗಳಿಗೆ ಹೊಸ ಭಾಷ್ಯ ಬರೆದ ಮೋಟಾರ್‌ಸೈಕಲ್ ನಮ್ಮ ಯೆಜ್ಡಿ ಸ್ಕ್ರಾಂಬ್ಲರ್. ಅಮೆಜಾನ್‌ನೊಂದಿಗೆ ನಾವು ಕೈಜೋಡಿಸಿದ್ದು, ಇಂದಿನ ಹೊಸ ತಲೆಮಾರಿನ ಯುವಕರಿಗೆ ಬೈಕ್ ಖರೀದಿ ಇನ್ನಷ್ಟು ಸುಲಭವಾಗಲಿದೆ, ಎಂದರು.

ಅಮೆಜಾನ್‌ನಲ್ಲಿ ಏನೆಲ್ಲಾ ಆಫರ್‌?

ಪ್ರೈಮ್ ಡೇ ಸೇಲ್‌ನಲ್ಲಿ ಈ ಬೈಕ್ (ದೆಹಲಿ ಎಕ್ಸ್-ಶೋರೂಮ್ ಬೆಲೆ 1,99,950 ರೂ.) ಬುಕ್ ಮಾಡುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.

ನೋ ಕಾಸ್ಟ್ ಇಎಂಐ ಸೌಲಭ್ಯ .

ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 3,000 ರೂ.ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್.

ಅಮೆಜಾನ್ ಪ್ರೈಮ್ ಸದಸ್ಯರು ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಶೇ. 5ರಷ್ಟು ಕ್ಯಾಶ್‌ಬ್ಯಾಕ್ ಹಾಗೂ ಪ್ರೈಮ್ ಅಲ್ಲದ
ಸದಸ್ಯರಿಗೆ ಶೇ. 3ರಷ್ಟು ಕ್ಯಾಶ್‌ಬ್ಯಾಕ್ (ಇಎಂಐ ವಹಿವಾಟುಗಳಿಗೆ ಅನ್ವಯಿಸುವುದಿಲ್ಲ).

ಬಿಸಿನೆಸ್‌ ಖರೀದಿಗಳ ಮೇಲೆ ಜಿಎಸ್‌ಟಿ ಬಿಲ್ ಮೂಲಕ ಶೇ. 18ರವರೆಗೆ ಉಳಿತಾಯದ ಅವಕಾಶ.

ಆನ್‌ಲೈನ್‌ನಲ್ಲಿ ಬುಕ್ ಮಾಡೋದು ಹೇಗೆ?

ಗ್ರಾಹಕರು ಅಮೆಜಾನ್‌ನಲ್ಲಿ ಪ್ರೈಮ್ ಡೇ ಆಫರ್‌ಗಳೊಂದಿಗೆ ಎಕ್ಸ್-ಶೋರೂಮ್ ಮೊತ್ತವನ್ನು ಪಾವತಿಸಿ ಬೈಕ್ ಬುಕ್ ಮಾಡಬೇಕು. ಆ ಬಳಿಕ ಹತ್ತಿರದ ಅಧಿಕೃತ ಡೀಲರ್ ನಿಮ್ಮನ್ನು ಸಂಪರ್ಕಿಸಿ, ಆನ್-ರೋಡ್ ಬೆಲೆ, ವಿಮೆ ಹಾಗೂ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾರೆ. ಆಕ್ಸೆಸರಿಗಳನ್ನು ಶೋರೂಮ್‌ನಲ್ಲೇ ಖರೀದಿಸಿ, ಅಲ್ಲಿಂದಲೇ ನಿಮ್ಮ ನೆಚ್ಚಿನ ಬೈಕ್ ಡೆಲಿವರಿ ಪಡೆಯಬಹುದು.

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಗ್ರಾಹಕರಿಗೆ ಚಿಂತೆರಹಿತ ಮಾಲೀಕತ್ವದ ಭರವಸೆಯನ್ನೂ ನೀಡುತ್ತದೆ.

4 ವರ್ಷ ಅಥವಾ 50,000 ಕಿ.ಮೀ. ವರೆಗಿನ ಸ್ಟ್ಯಾಂಡರ್ಡ್ ವಾರಂಟಿ.

6 ವರ್ಷಗಳವರೆಗೆ ವಿಸ್ತರಿತ ವಾರಂಟಿ ಆಯ್ಕೆಗಳು.

8 ವರ್ಷಗಳವರೆಗೆ ರೋಡ್‌ಸೈಡ್‌ ಅಸಿಸ್ಟೆನ್ಸ್‌ ಸೇವೆ. ದೇಶಾದ್ಯಂತ ಇರುವ 400 ಕ್ಕೂ ಹೆಚ್ಚು ಸರ್ವೀಸ್ ಸೆಂಟರ್‌ಗಳಲ್ಲಿ 5 ವರ್ಷಗಳವರೆಗೆ ಎಎಂಸಿ ಸೇವೆ ಲಭ್ಯವಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular