HomeEntertainment'ಅಮರ್ ಅಕ್ಬರ್ ಅಂತೋನಿ' ಚಿತ್ರದ ಸ್ಕ್ರಿಪ್ಟ್ ರೈಟರ್ ಪ್ರಯಾಗ್ ರಾಜ್ ಇನ್ನಿಲ್ಲ

‘ಅಮರ್ ಅಕ್ಬರ್ ಅಂತೋನಿ’ ಚಿತ್ರದ ಸ್ಕ್ರಿಪ್ಟ್ ರೈಟರ್ ಪ್ರಯಾಗ್ ರಾಜ್ ಇನ್ನಿಲ್ಲ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಯಶಸ್ವಿ ಚಿತ್ರ ‘ಅಮರ್ ಅಕ್ಬರ್ ಅಂತೋನಿ’ ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿದ್ದ ಪ್ರಯಾಗ್ ರಾಜ್ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದ 88 ವರ್ಷದ ಅವರು ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ.

ಬಾಲಿವುಡ್ ಚಿತ್ರರಂಗದ ಖ್ಯಾತನಾಮರಾದ ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರ ಚಿತ್ರಗಳಿಗೆ ಇವರು ಕಥೆ ಬರೆದಿದ್ದರು. ಈ ಪೈಕಿ ಅಮಿತಾಬ್ ಬಚ್ಚನ್ ಅಭಿನಯದ ‘ಅಮರ್ ಅಕ್ಬರ್ ಅಂತೋನಿ’, ‘ನಸೀಬ್’ ಮತ್ತು ‘ಕೂಲಿ’ ಸೇರಿದಂತೆ ಹಲವು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮುಂಬೈನ ಬಾಂದ್ರಾ ನಿವಾಸದಲ್ಲಿ ಪ್ರಯಾಗ್ ರಾಜ್ ನಿಧನ ಹೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅಮಿತಾಬ್ ಬಚ್ಚನ್, ಬಾಲಿವುಡ್ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿಕೊಂಡಿದೆ’ ಎಂದು ಬರೆದಿದ್ದಾರೆ.

ಮತ್ತೊಂದು ಮಹತ್ವದ ಸಂಗತಿ ಎಂದರೆ ಅಮಿತಾಬ್ ಬಚ್ಚನ್, ರಜನಿಕಾಂತ್ ಮತ್ತು ಕಮಲ ಹಾಸನ್ ಅಭಿನಯಿಸಿದ್ದ ‘ಗಿರಫ್ತಾರ್’ ಚಿತ್ರದ ಕಥೆಯನ್ನು ಪ್ರಯಾಗ್ ರಾಜ್ ಅವರೇ ಬರೆದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular