
ಗಿಡವು ನೀರಿಲ್ಲದೆ, ಬಿಸಿಲು ಇಲ್ಲದೆ ಗಾಳಿಯಲ್ಲೇ ಬದುಕಬಲ್ಲದು. ಮನೆಯ ಪ್ರಧಾನ ಭಾಗದ ಮೇಲ್ಭಾಗಕ್ಕೆ ಬೇರು ಮೇಲೆ ಬರುವ ಹಾಗೆ ಬುಡ ಮೇಲಾಗಿ ಕಟ್ಟಿದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ಸಂತೋಷವಾಗಿ ನೆಲೆಸುತ್ತಾಳೆ. ಈ ಗಿಡ ಮನೆಗೆ ಯಾವುದೇ ಕ್ರಿಮಿ ಸೊಳ್ಳೆ ಬಾರದ ಹಾಗೇ ಕಾಪಾಡುತ್ತದೆ.
ಇದರ ಲೋಳೆ ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ. ಇದರ ರಸವನ್ನು ಮುಂಜಾನೆ ಬರೀ ಹೊಟ್ಟೆಗೆ ಸೇವಿಸಿದರೆ ಬೊಜ್ಜು ಕರಗುತ್ತದೆ. ಶಾರೀರಿಕ ಮತ್ತು ವಿಕಿರಣಗಳಿಂದ ಉಂಟಾದ ಸುಟ್ಟ ಗಾಯಗಳನ್ನು ವೇಗವಾಗಿ ಗುಣಮುಖ ಮಾಡುತ್ತದೆ.

